ಬಂಟ್ವಾಳ: ದೇಶದ ಹಿರಿಯ ಹೋರಾಟಗಾರ, ಡಾ. ಅಣ್ಣ ಹಜಾರೆಯವರನ್ನು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ನಿಯೋಗ ಮಂಗಳವಾರ ಪುಣೆಯ ರಾಲೇಗಾನ್ ಸಿದ್ದಿಯಲ್ಲಿ ಭೇಟಿ ಮಾಡಿತು.
ರಾಜ್ಯದ್ಯಂತ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸುತ್ತಿರುವ ರಾಜ್ಯ ಸಮಿತಿ ದೇಶಾದ್ಯಂತ ಏಕರೂಪದ ಶಿಕ್ಷಣ ಜಾರಿಗೊಳಿಸುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಯನ್ನು ಸಿದ್ದಪಡಿಸಿದ್ದು,ಮಾರ್ಗದರ್ಶನ ಪಡೆಯುವ ನಿಟ್ಟಿನಲ್ಲಿ ಅಣ್ಣಾ ಹಜಾರೆಯವರೊಂದಿಗೆ ಚರ್ಚಿಸಿತು.
ಸರಕಾರಿ ಶಾಲೆ ಉಳಿಸಿ ಬೆಳಿಸಿ ರಾಜ್ಯ ಸಮಿತಿಯ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅಣ್ಣ ಹಜಾರೆ ಸಮಿತಿಯ ಮುಂದಿನ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ ವದಲ್ಲಿ ಜನರು ಮಾಲೀಕರು, ನಾವು ಆರಿಸಿ ಕಳುಸಿದ ಪ್ರತಿನಿಧಿಗಳು ಸೇವಕರು. ಆದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೇ ವ್ಯತಿರಿಕ್ತವಾಗಿದೆ. ಜನರು ಸಂಘಟಿತರಾದಗ ಮಾತ್ರ ಯಾವುದೇ ಹೋರಾಟ ಯಶಸ್ವಿಯಾಗಲು ಸಾಧ್ಯವಿದೆ ಎಂದರು.
ಈ ಸಂದರ್ಭ ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಗೌರವಾಧ್ಯಕ್ಷ ಎಸ್. ರಾಜಶೇಖರ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅಂಚನ್, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್, ಸದಸ್ಯರಾದ ಅಶೋಕ್ ಎ. ಚಿಕ್ಕಬಳ್ಳಾಪುರ, ವಿಕ್ರಮ್ ಹರೇಕಳ, ಮಯೂರ್ ಕೀರ್ತಿ, ರಾಮಚಂದ್ರ ಪೂಜಾರಿ ಹಾಜರಿದ್ದರು.

