ಕೈಕಂಬ : `ಮೋನೆಗ್ ತೆಲಿಕೆ, ಬಾಯಿಗ್ ಕೂಲಿ ನಿಲಿಕೆ'(ಮುಖಕ್ಕೆ ನಗು, ಬಾಯಿಯ ತುಂಬ ಹಲ್ಲು) ಎಂಬ ತುಳುವಿನ ನುಡಿಗಟ್ಟಿನಂತೆ ಹಲ್ಲಿನ ಮಹತ್ವದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಹಲ್ಲಿನಿಂದ ಆಹಾರ ಸರಿಯಾಗಿ ಜಗಿದು ಹೊಟ್ಟೆಗೆ ಹೋದರೇನೇ ಆರೋಗ್ಯ ಚೆನ್ನಾಗಿರುತ್ತದೆ ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಗುರುಪುರದ ಕುಕ್ಕುದಕಟ್ಟೆಯಲ್ಲಿ ಭಾನುವಾರ ಗುರುಪುರ ಬಂಟರ ಮಾತೃ ಸಂಘ(ರಿ) ಇದರ ಆಶ್ರಯದಲ್ಲಿ ವಾಮಂಜೂರು ಲಿಂಗಮಾರು ಸುಬ್ಬಯ್ಯ ಶೆಟ್ಟಿ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಉಚಿತ ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಹಲ್ಲು ದೇಹದ ಶಕ್ತಿ ಎಂದು ಆಧ್ಯಾತ್ಮದಲ್ಲಿ ಹೇಳಲಾಗಿದೆ. ಹಲ್ಲು ಹೋದರೆ ದೇಹದಲ್ಲಿ ಶಕ್ತಿ ಕಳೆದುಕೊಂಡ ಅನುಭವವಾಗುತ್ತದೆ. ಹಲ್ಲಿನ ಸಂರಕ್ಷಣೆಗೆ ಎಲ್ಲರೂ ಕಾಳಜಿ ವಹಿಸಬೇಕೆಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.5vpdantha siibira (2)

ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ, ಗಡಿಕಾರ ಪ್ರಮೋದ್ ರೈ ಮಾತನಾಡುತ್ತ, ಬಂಟ ಎಂದರೆ ನಾಯಕ, ರಕ್ಷಕ ಎಂಬ ಅರ್ಥವಿದೆ. ಬಂಟರು ಧರ್ಮ ಮತ್ತು ಸಮಾಜ ರಕ್ಷಣೆಯಲ್ಲೂ ಹೆಸರು ಮಾಡಿದ್ದಾರೆ. ಸಂಘದಿಂದ ಇಂತಹ ಕೆಲಸಗಳು ಹೆಚ್ಚೆಚ್ಚು ನಡೆಯಲಿ ಎಂದು ಹಾರೈಸಿದರು.

ಶಿಬಿರ ಉದ್ಘಾಟಿಸಿದ ಶಿಬಿರ ಪ್ರಾಯೋಜಕ ಲಿಂಗಮಾರು ಸುಬ್ಬಯ್ಯ ಶೆಟ್ಟಿಯವರಿಗೆ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಸಂಘದ ಕಾರ್ಯಕಾರಿ ಸಮಿತಿ ಕೋಶಾಧಿಕಾರಿ ರವೀಂದ್ರನಾಥ ಶೆಟ್ಟಿ, ಸೀತಾರಾಮ ಶೆಟ್ಟಿ ಲಿಂಗಮಾರುಗುತ್ತು(ಮುಂಬೈ ಉದ್ಯಮಿ), ಹೇಮಂತ ಶೆಟ್ಟಿ ನಾರಳ(ಪಿಆರ್‍ಒ ಕೆ ಎಸ್ ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ), ದಾಮೋದರ ಮೇಂಡ(ನಿವೃತ್ತ ಶಿಕ್ಷಕ), ವಿನಯ ಕುಮಾರ್ ಶೆಟ್ಟಿ(ಅಧ್ಯಕ್ಷ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ), ಚಂದ್ರಹಾಸ ರೈ(ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ, ಶ್ರೀ ಅಮೃತೇಶ್ವರ ದೇವಸ್ಥಾನ ವಾಮಂಜೂರು), ಉಮೇಶ ರೈ ಮೇಗಿನಮನೆ, ಪದ್ಮನಾಭ ಶೆಟ್ಟಿ, ಡಾ. ತಾರಾಚಂದ್ರ, ಡಾ. ನಿರುಪಮಾ, ಸುದರ್ಶನ ಶೆಟ್ಟಿ ಪೆರ್ಮಂಕಿ ಮೊದಲಾದವರಿದ್ದರು.

ಎ ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ನಿಟ್ಟೆ ವಿದ್ಯಾಲಯ(ಮಂಗಳೂರು) ಇದರ ನುರಿತ ದಂತ ವೈದ್ಯರು ಶಿಬಿರಕ್ಕೆ ಆಗಮಿಸಿದ ನೂರಾರು ಮಂದಿಯ ದಂತ ತಪಾಸಣೆ ನಡೆಸಿ, ಚಿಕಿತ್ಸೆ ಸಲಹೆ ನೀಡಿದರು.

By suddi9

Leave a Reply

Your email address will not be published. Required fields are marked *