ಬಂಟ್ವಾಳ:  ದ.ಕ ಜಿಲ್ಲೆಯಲ್ಲಿ  ಅಂತರ್ಜಲ ಮಟ್ಟ ಕುಸಿತಕ್ಕೆ ಭತ್ತದ ಬೇಸಾಯ ಅವನತಿಯತ್ತ ಸಾಗುತ್ತಿರುವುದೇ ಕಾರಣವಾಗಿದ್ದು, ಭತ್ತದ ಕೃಷಿಯ ಈಗಿನ ಸ್ಥಿತಿಗೆ ಸರಕಾರದ ತಪ್ಪು ನಿರ್ಧಾರಗಳು  ಕೂಡ ಕಾರಣವಾಗುತ್ತಿದೆ. ಹೊಟ್ಟೆಗೆ ಅನ್ನ ನೀಡುವ ಭತ್ತದ ಕೃಷಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುವ ಕಾಯಕವಾಗಿದೆಎಂದು ಬೆಳ್ತಂಗಡಿ ಮಿತ್ತಬಾಗಿಲು ಸಾವಯವ ಭತ್ತದ ಕೃಷಿಯ ಹಾಗೂ ಭತ್ತದ ತಳಿ ಸಂರಕ್ಷಕರಾದ ಬಿ.ಕೆ.ಪರಮೇಶ್ವರ ರಾವ್ ಹೇಳಿದರು.15-17-34-DSC_0882_1

ಅವರು ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಭತ್ತದ ಬೇಸಾಯ ವಿಚಾರ ಸಂಕೀರ್ಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.ನೇತ್ರಾವತಿ ಕೃಷಿಕರ ಅಭಿವೃದ್ಧಿ ಸಂಘಗಳ ಒಕ್ಕೂಟ ಬಂಟ್ವಾಳ, ದಿಶಾ ಟ್ರಸ್ಟ್ ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಅಭಿಯಾನ ಅಂಗವಾಗಿ ನಡೆದ ಕಾರ್‍ಯಾಗಾರದ ಉದ್ಘಾಟನೆಯನ್ನು ನೇತ್ರಾವತಿ ಒಕ್ಕೂಟದ ಅದ್ಯಕ್ಷ   ಹರ್ಷೆಂದ್ರ       ಹೆಗ್ಡೆ ಅಂತರಗುತ್ತು ಕೊಲ ನೆರವೇರಿಸಿದರು. ದಿಶಾ ಟ್ರಸ್ಟ್ ನಿರ್ದೇಶಕರಾದ ಸಿಲ್ವೆಸ್ಟರ್ ಡಿಸೋಜ ಸಭಾಧ್ಯಕ್ಷತೆ ವಹಿಸಿದ್ದರು. ವಿಚಾರ ಸಂಕಿರ್ಣದಲ್ಲಿ ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿ ವಾಲ್ಡರ್ , ಭತ್ತದ ಕೃಷಿಕರಾದ ಸುದರ್ಶನ ಶೆಟ್ಟಿ ಬಡಕಬೈಲು ,ವಿಷ್ಣುಮೂರ್ತಿ ಭಟ್ ಪಲ್ಲಿಪಾಡಿ, ಹಷೇಂದ್ರ ಹೆಗ್ಡೆ ಕೊಲ ತಮ್ಮ ವಿಚಾರ ಮಾಡಿಸಿದರು. ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಕರಾದ ರುದೇಶ್   ಪ್ರಸ್ತಾವಿಸಿದರು.ಕ್ಷೇತ್ರ ಮೇಲ್ವಿಚಾರಕಿ ಪ್ರಭಾವತಿ ಕಾರ್‍ಯಕ್ರಮ ನಿರೂಪಿಸಿ. ಕ್ಷೇತ್ರ ಮೇಲ್ವಿಚಾರಕಿ ವಿನೋದ ಸ್ವಾಗತಿಸಿದರು.  ರಂಜಿನಿ ವಂದಿಸಿದರು.

By suddi9

Leave a Reply

Your email address will not be published. Required fields are marked *