ಬಂಟ್ವಾಳ: ಬಂಟ್ವಾಳ ಬಿಜೆಪಿ ವತಿಯಿಂದ ಉಳಿ ಗ್ರಾಮ ಪಂಚಾಯತ್ ಬಿಜೆಪಿ ಸಮಿತಿಯ ಕಾರ್ಯಕರ್ತರ ಸಮಾಲೋಚನ ಸಭೆ ಕಕ್ಯಪದವುನಲ್ಲಿ ಮೇ 2ರಂದು ಜರಗಿತು.
ಬಂಟ್ವಾಳ ಶಾಸಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು. ಈ ಸಂಧರ್ಭದಲ್ಲಿ ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕ್ಷೇತ್ರ ಕಾರ್ಯದರ್ಶಿಗಳಾದ ರಮಾನಾಥ ರಾಯಿ,ರಂಜಿತ್ ಮೈರ,ವಸಂತ ಸಾಲ್ಯಾನ್ ರಾಮನಗರ, ಪಂಚಾಯತ್ ಉಪಾಧ್ಯಕ್ಷ ಸುರೇಶ್ ಮೈರ,ಪ್ರಮುಖರಾದ ರಾಜ್‍ಕುಮಾರ್ ಬಳ್ಳಿ,ಸನತ್ ಕಕ್ಯಪದವು,ಜಿನ್ನಪ್ಪ ಗೌಡ,ಯಶವಂತ,ಸುರೇಂದ್ರ,ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

