ಅನ್ವಾರುಲ್ ಹುದಾ ದಲ್ಲಿ ಎಸ್ಸೆಸ್ಸೆಫ್ ಸಂಸ್ಥಾಪನಾ ದಿನ ಆಚರಣೆ
ವಿರಾಜಾಪೇಟೆ : ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾ ದಲ್ಲಿ ಎಸ್ಸೆಸ್ಸೆಫ್ ಸಂಸ್ಥಾಪನಾ ದಿನ ಆಚರಿಸಲಾಯಿತು.
ದಅವಾಅನ್ವಾರುಲ್ ಹುದಾ ದಲ್ಲಿ ಎಸ್ಸೆಸ್ಸೆಫ್ ಸಂಸ್ಥಾಪನಾ ದಿನ ಆಚರಿಸಲಾಯಿತು ಮುದರ್ರಿಸರಾದ ಇಸ್ಮಾಯಿಲ್ ಸಖಾಫಿ ಉಸ್ತಾದ್ ಹಾಗೂ ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಶಿಹಾಬುದ್ದೀನ್ ಅನ್ವಾರಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ಮಾಯಿಲ್ ಅನ್ವಾರಿ ಅಲ್.ಅಹ್ಸನಿ ಉದ್ಘಾಟಿಸಿದರು. ಖಮರುದ್ದೀನ್ ಅನ್ವಾರಿ ರವರು ಮುಖ್ಯ ಭಾಷಣ ಮಾಡಿದರು. ಸುಹೈಲ್ ಮತ್ತು ತಂಡದಿಂದ ಕ್ರಾಂತಿ ಗೀತೆ ಹಾಡುವ ಮೂಲಕ ಸಭೆಯಲ್ಲಿ ಕ್ರಾಂತಿಯ ಅಲೆಯನ್ನೆಬ್ಬಿಸಿದರು.ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ, ಉಪನ್ಯಾಸಕರಾದ ಇಬ್ರಾಹಿಂ ಮಾಷ್ಟರ್ ಖಮರುದ್ದೀನ್ ಸಖಾಫಿ ಉಪಸ್ಥಿತರಿದ್ದರು. ಶಾಫಿದ್ ನಂಜರಾಯಪಟ್ಟಣ ಸ್ವಾಗತಿಸಿ ಶಹೀರ್ ಎರುಮಾಡ್ ವಂದಿಸಿದರು.