ಬಂಟ್ವಾಳ, :  ತಾಲೂಕಿನಾದ್ಯಂತ ನಡೆದ ದನ ಕಳವು ಪ್ರಕರಣಗಳನ್ನು ಭೇದಿಸಿರುವ ಬಂಟ್ವಾಳ  ಗ್ರಾಮಾಂತರ  ಪೊಲೀಸರು ನಾಲ್ವರು ಆರೋಪಿಗಳನ್ನು ಮಂಗಳವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಪುದು ಗ್ರಾಮದ ನಿವಾಸಿಗಳಾದ ಇಮ್ರಾನ್ ಯಾನೆ ಕುಟ್ಟ ಇಮ್ರಾನ್ (೩೧),
ಜೈನುದ್ದೀನ್ (೨೨), ಹಿದಾಯುತುಲ್ಲಾ (೨೪), ಫಾರೂಕ್ ಯಾನೆ ಮಲಿಕ್ (೨೯) ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರುತಿ ರಿಡ್ಜ್ ಕಾರು, ವಿವಿಧ ಪ್ರಕರಣಗಳಲ್ಲಿ ಕಳವು ಮಾಡಿರುವ ೪ ದನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

00
ಆರೋಪಿಗಳು ಅಮೆಮಾರ್ ಮತ್ತು ಕುಂಪನಮಜಲು ಪರಿಸರದವರಾಗಿದ್ದಾರೆ. ಬಂಧಿತ ಆರೋಪಿಗಳ       ಮೇಲೆ          ಬಂಟ್ವಾಳ ಗ್ರಾಮಾಂತರ,  ನಗರ, ವಿಟ್ಲ, ಪೂಂಜಾಲಕಟ್ಟೆ, ವಾಮಂಜೂರು, ಕಾವೂರು, ಕೋಣಾಜೆ, ಉಳ್ಳಾಲ, ಸೋಮವಾರ ಪೇಟೆ, ಕುಶಾಲನಗರ, ಸಕಲೇಶಪುರ, ಬಜಪೆ, ಮಡಿಕೇರಿ, ಶನಿವಾರ ಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳವು, ಹಲ್ಲೆ, ದೊಂಬಿ, ಪ್ರಕರಣಗಳು ದಾಖಲಾಗಿರುತ್ತವೆ ಎಂದು ಪೊಲೀದರು ತಿಳಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,  ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಶರಣ ಗೌಡ ಮಾರ್ಗದರ್ಶನ , ಎಸ್ಸೈ ಪ್ರಸನ್ನ ಮತ್ತತವ   ಸಿಬಂದಿಗಳು ಕಾರ್ಯಾಚರಣೆ  ನಡೆಸಿದ್ದರು.

By suddi9

Leave a Reply

Your email address will not be published. Required fields are marked *