ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಕಲಿ ಮತದಾನಕ್ಕೆ ಯತ್ನಕ್ಕೆ ಸಂಬಂಧಿಸಿ ೨ ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಕೈಕಂಬ ಸಮೀಪದ ಪರ್ಲಿಯಾ ಸರಕಾರಿ ಶಾಲೆಯಲ್ಲಿ ಮಧ್ಯಾಹ್ನದ ವೇಳೆ ಇಬ್ಬರು ನಕಲಿ ಮತದಾನಕ್ಕೆ ಯತ್ನಿಸುವ ವೇಳೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರಿಬ್ಬರು ಬೇರೊಬ್ಬರ ಹೆಸರನ್ನು ಬಳಕೆ ಮಾಡಿ ಮತದಾನಕ್ಕೆ ಯತ್ನಿಸಿದ್ದಾರೆಂದು ಬೂತ್ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅದಲ್ಲದೆ, ಸಂಜೆ ವೇಳೆಗೆ ಕಲ್ಲಡ್ಕದ ಗ್ರಾಪಂ ಕಟ್ಟಡದಲ್ಲಿರುವ ನೆಟ್ಲ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಲು ಯತ್ನಿಸಿ ವ್ಯಕ್ತಿಯನ್ನು ಚುನಾವಣೆ ಕರ್ತವ್ಯ ಅಧಿಕಾರಿಗಳು ಪೋಲೀಸರಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ.

By Suddi9

Leave a Reply

Your email address will not be published. Required fields are marked *