ಬಂಟ್ವಾಳ: ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ಮತದಾನ ಸಂಪೂರ್ಣ ಶಾಂತಯುತವಾಗಿ ನಡೆದಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ 249 ಮತಗಟ್ಟೆಯನ್ನು ಗುರುತಿಸಲಾಗಿದ್ದು, ಕೆಲ ಮತಗಟ್ಟೆಯಲ್ಲಿ ಸಣ್ಣ ಪುಟ್ಟ ಮಾತಿನಚಕಮಕಿ ಹೊರತು ಪಡಿಸಿ ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

WhatsApp Image 2019-04-18 at 07.17.41

 

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ,ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಪತ್ನಿ ಸಮೇತರಾಗಿ ಬಂಟ್ವಾಳ ಕಸ್ಬಾ ಗ್ರಾಮದ ಎಸ್ ವಿ ಎಸ್ ಹೈಸ್ಕೂಲ್ ಕನ್ನಡ ಮಾಧ್ಯಮ ಶಾಲಾ ಮತಗಟ್ಟೆಯಲ್ಲಿ ಮತಚಲಾಯಿಸಿದರು.ಕಾಂಗ್ರೆಸ್ ಪರವಾಗಿ ವಾತಾವರಣ ಇದ್ದು, ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗಿ ಬರಬೇಕು ಎಂಬುದು ನಮ್ಮಿಚ್ಚೆ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.ಈ ಸಂದರ್ಭಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಪ್ರಧಾನಿಯಾಗಬಹುದೇ, ಅಥವಾ ಮೋದಿ ಮತ್ತೆ ಬರಬಹುದೇ ಎಂಬ ಪ್ರಶ್ನೆಗೆ ಇದಕ್ಕೆ ಉತ್ತರಿಸುವುದಿಲ್ಲ ಎಂದು ನಸುನಕ್ಕರು. ಬಳಿಕ ರಾಹುಲ್ ಬರಬೇಕು ಎಂಬುದು ನಮ್ಮಿಚ್ಛೆ ಎಂದು ಹೇಳಿದರು. ಎಲ್ಲರೂ ಮತದಾನ ಮಾಡುವ ಮೂಲಕ ದೇಶವನ್ನು ಸದೃಢಗೊಳಿಸಬೇಕು ಎಂದು ಕರೆ ನೀಡಿದ ಅವರು, ಮತದಾನವನ್ನು ಚಲಾಯಿಸಿದರೆ ದೇಶ ಪ್ರಬಲವಾಗುತ್ತದೆ ಎಂದರು.

IMG-20190417-WA0122

ಮಾಜಿ ಸಚಿವ ರಮಾನಾಥ ರೈ ಅವರು ಕಳ್ಳಿಗೆ ಗ್ರಾಮದ ತೊಡಂಬಿಲ ಸೇಕ್ರಡ್ ಹಾಟ್ ೯ ಶಾಲಾ ಮತಗಟ್ಟೆಯಲ್ಲಿ ಮತಚಲಾಯಿಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯ ಜನ ಈ ಬಾರಿ ಬದಲಾವಣೆ ಬಯಸಿದ್ದು,ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಅವರು,ಮಂಗಳೂರು ಉತ್ತರ ಕ್ಷೇತ್ರಕ್ಕೊಳಪಟ್ಟ ತೆಂಕ ಎಡಪದವು ಸ್ವಾಮಿ ವಿವೇಕಾನಂದ ಹೈಸ್ಕೂಲ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಪ್ರದಾನಿ ನರೇಂದ್ರ ಮೋದಿಯವರು ಕಳೆದ ಐದು ವರ್ಷ ನೀಡಿರುವ ಭ್ರಷ್ಟಾಚಾರ ರಹಿತ ಆಡಳಿತ,ವಿವಿಧ ಜನಪರ ಯೋಜನೆಗಳು ಸಾಮಾನ್ಯ ಜನರನ್ನು ತಲುಪಿದ್ದು,ಮೋದಿಯವರನ್ನು ಮತ್ತೊಮ್ಮೆ ಪ್ರದಾನಿಯನ್ನಾಗಿಸಲು ಜನತೆ ಕಾತರರಾಗಿದ್ದಾರೆ ಎಂದರು.ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲು ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಸುಮಾರು ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಿದರು.ಎಸ್ ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಅವರು ತುಂಬೆ ಬಿ.ಎ.ಪ.ಪೂ.ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

04-37-28-IMG-20190418-WA0008

 ಬಂಟ್ವಾಳ ಕಸ್ಬ ಗ್ರಾಮ ,ಬಿ.ಮೂಡ ಗ್ರಾಮ ಸಹಿತ ಕೆಲ ಮತಗಟ್ಟೆಯಲ್ಲಿ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆದ ಹಿನ್ನಲೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲಾಗದೆ ನಿರಾಶೆಯಿಂದ ವಾಪಾಸಾದ ಪ್ರಸಂಗವು ನಡೆದಿದೆ.ಕಳೆದ ವಿಧಾನಸಭೆ,ಪುರಸಭಾ ಚುನಾವಣೆಯಲ್ಲಿ ಮತಚಲಾಯಿಸಿರುವ ಮತದಾರರು, ಗುರುವಾರ ಮತಚಲಾವಣೆ ಬಂದಾಗ ಮತದಾನದಿಂದ ವಂಚಿತರಾಗಿರುವುದರಿಂದ ಮತಗಟ್ಟೆ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ. ಘಟನೆಯು ಬಂಟ್ವಾಳ ಎಸ್ ವಿ ಎಸ್ ಶಾಲೆಯಲ್ಲಿ ನಡೆದಿದೆ.ಮಹಿಳಾ ಮತದಾರರೇ ಹೆಚ್ಚು ಮತದಾನದಿಂದ ವಂಚಿತರಾಗಿದ್ದಾರೆ. ಬಿ.ಮೂಡ ಗ್ರಾಮ ಕೊಡಂಗೆ ಶಾಲೆಯಲ್ಲಿ ನಕಲಿ ಮತದಾನಕ್ಕೆ ಯತ್ನಿಸಲಾಗಿದೆ ಎಂಬ ವದಂತಿ ಹಬ್ಬಿದ್ದು,ಈ ಬಗ್ಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.ಪುದು ಗ್ರಾಪಂ.ಮತಗಟ್ಟೆಯಲ್ಲಿ ಇವಿಎಂ ಯಂತ್ರ ಕೆಟ್ಟು ಹೋದ ಹಿನ್ನಲೆಯಲ್ಲಿ ಒಂದು ತಾಸು ತಡವಾಗಿ ಮತದಾನ ಆರಂಭವಾಗಿದೆ ಎಂದು ತಿಳಿದುಬಂದಿದೆ. ಅಮ್ಮೆಮಾರು ಶಾಲೆಯ ಮತಗಟ್ಟೆಯ ಗೇಟ್ ಬಳಿ ಪಕ್ಷವೊಂದರ ಕಾರ್ಯ ಕರ್ತರು ಜಮಾಯಿಸಿದ್ದರಿಂದ ಸ್ಥಳದಲ್ಲಿ ದ್ದ ಪೊಲೀಸರು ಲಾಠಿ ಬೀಸಿಚದುರಿದರು.


04-50-00-IMG-20190418-WA0019

By suddi9

Leave a Reply

Your email address will not be published. Required fields are marked *