ಪೊಳಲಿ: ಭಾರೀ ಬಿಗಿಭದ್ರತೆಯಲ್ಲಿ ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ಮಾರ್ಚ್ 9ರಂದು ಶನಿವಾರ ಸಂಜೆ 5.20ರ ಸುಮಾರಿಗೆ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ತೆರಳಿ ಪುನರ್ ನಿರ್ಮಾಣಗೊಂಡ ದೇವಸ್ಥಾನವನ್ನು ವೀಕ್ಷಿಸಿ-ಪ್ರಾರ್ಥನೆ ಸಲ್ಲಿಸಿದರು. ಮಂಗಳೂರಿನಲ್ಲಿ ಕ್ಲಸ್ಟರ್ ಮಟ್ಟದ ಬಿಜೆಪಿ ಸಮಾವೇಶವನ್ನು ಮುಗಿಸಿ ನೇರವಾಗಿ ಪೊಳಲಿಗೆ ಆಗಮಿಸಿದ ರಾಜ್ನಾಥ್ ಸಿಂಗ್ ಅವರಿಗೆ ಭಾರೀ ಬಿಗಿಭದ್ರತೆ ಒದಗಿಸಲಾಗಿತ್ತು.
ಮೊದಲೇ ಸಾವಿರಾರು ಭಕ್ತರು ನೆರದಿರುವುದರಿಂದ ಪೊಲೀಸರು ಯಾವುದೇ ಗೊಂದಲಕ್ಕೊಳಗಾದಂತೆ ಭಕ್ತರನ್ನು ಆಯಕಟ್ಟಿನ ಜಾಗದಲ್ಲಿ ನಿಲ್ಲಿಸಿ ನೂಕು ನುಗ್ಗಲು ಉಂಟಾಗದಂತೆ ನೋಡಿಕೊಂಡು ಸಿಂಗ್ ಅವರಿಗೆ ದೇವರ ದರ್ಶನ ಮಾಡಲು ಸುಲಲಿತ ಅವಕಾಶ ಮಾಡಿಕೊಟ್ಟರು. ಪೊಳಲಿಯ ಶಿಲ್ಪಕಲಾ ಚಾತುರ್ಯವನ್ನು ಕಂಡು ದಿಗ್ಭ್ರಮೆ ವ್ಯಕ್ತಪಡಿಸಿ, ಪ್ರಾರ್ಥಿಸಿದರು. ಪುರೋಹಿತವರ್ಗದವರು, ತಂತ್ರಿವರ್ಯರು ಪ್ರಸಾದ ವಿತರಿಸಿದರು.
ಈ ವೇಳೆ ಬ್ರಹ್ಮಕಲಶೋತ್ಸವದ ಅಧ್ಯಕ್ಷ-ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಅವರು ಶ್ರೀದೇವಿಯ ಮೂರ್ತಿಯನ್ನು ರಾಜ್ನಾಥ್ ಸಿಂಗ್ ಅವರಿಗೆ ನೀಡಿದರು.

ಮಂಗಳೂರಿನಲ್ಲಿ ಸಮಾವೇಷ ಮುಗಿಸಿ ಅಡ್ಯಾರ್ ಫರಂಗಿಪೇಟೆ ಮುಖಾಂತರ ಪೊಳಲಿಗೆ ಆಗಮಿಸಿದ ಅವರು ಸುಮಾರು 5.40ರ ಸುಮಾರಿಗೆ ಪೊಳಲಿ ದೇವಸ್ಥಾನದಿಂದ ತೆರಳಿದರು. ಸಾವಿರಾರು ಭಕ್ತರು ತಾಜ್ನಾಥ್ ಅವರನ್ನು ನೋಡಿ ರಾಜ್ನಾಥ್ ಸಿಂಗ್ಗೆ ಜೈಕಾರ ಹಾಕಿದರು.
ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು , ರಾಜೇಶ್ ನಾಯಕ್ ಉಳಿಪಾಡಿಗುತ್ತು,ಶಾಸಕ ಉಮಾನಾಥ್ ಕೋಟ್ಯಾನ್ ದೇವಳದ ಾಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ, ತಾರಾನಾಥ ಆಳ್ವ,ಚೇರ ಸೂರ್ಯನಾರಾಯಣ ರಾವ್, ಕಾರ್ಯನಿರ್ವಾಹಣಾಧಿಕಾರಿ ಪ್ರವೀಣ್, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು. ಇದರ ಹೊರತು ಯಾರಿಗೂ ಅವಕಾಶ ನೀಡಲಿಲ್ಲ.












