ಕಡಬ: ಮಾರ್ಚ್೮: ಏಮ್ಸ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಕಡಬದ ನೂತನ ಆಡಳಿತ ಕಛೇರಿಯನ್ನು ಕಡಬದ ಕಳಾರ ಕೃಪಾ ಸಂಕೀರ್ಣದಲ್ಲಿ ಉದ್ಘಾಟನೆ ಮಾಡಲಾಯಿತು. ನೂತನ ಕಛೇರಿಯನ್ನು ಪುಟಾಣಿ ಮಗು ವಿಧಾತ್ ವಿಷ್ಣು ,ರಾಜಕೀಯ ಮುಖಂಡ ಶ್ರೀ ರೋಯಿ ಪದವು,ಕೃಪಾ ಸಂಕೀರ್ಣದ ಮಾಲಿಕ ಡಾ.ಮ್ಯಾಥ್ಯೂ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಏಮ್ಸ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ಕಡಬದ ಅಧ್ಯಕ್ಷರಾದ ಕುಮಾರಿ ಮರಿಯಂ ಫೌಝ ಉಪಸ್ಥಿತರಿದ್ದರು.


