ಪೊಳಲಿ: ಬ್ರಹ್ಮಕಲಶೋತ್ಸವಕ್ಕೆ ಸಜ್ಜುಗೊಂಡಿರುವ ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಸಾವಿರಸೀಮೆಯನ್ನು ಸಂಪೂರ್ಣವಾಗಿ ಸೀರೆ-ಕೇಸರಿ ಪತಾಕೆಗಳಿಂದ ಶೃಂಗರಿಸಲಾಗಿದೆ. ನಾನಾ ಬಣ್ಣದ ಜರತಾರಿ ಸೀರೆಗಳನ್ನು ಒಂದಕ್ಕೊಂದು ಪೋಣಿಸಿ ಶೃಂಗರಿಸಲಾಗಿದ್ದು, ಭಕ್ತರನ್ನು ವಿಶೇಷ ಆಕರ್ಷಿಸುತ್ತಿದೆ.3-00001

3-00001

ಪೊಳಲಿಗೆ ಹರಕೆಯ ರೂಪದಲ್ಲಿ ಬಂದಿರುವ ಪಟ್ಟೆಸೀರೆಗಳನ್ನು ನಗರಾಲಂಕಾರಗೊಳಿಸಲು ಒಪ್ಪಿಗೆ ಪಡೆದು ಸಾವಿರ ಸೀಮೆಗಳನ್ನು ಅದರಿಂದಲೇ ಶೃಂಗರಿಸಲಾಗಿದೆ. ಸೀರೆಯಿಂದಲೇ ನಿರ್ಮಿಸಿದ ದ್ವಾರ, ಸೀರೆಯಿಂದಲೇ ನಿರ್ಮಿಸಿದ ತಳಿರುತೋರಣಗಳಿಂದಾಗಿ ಬ್ರಹ್ಮಕಲಶೋತ್ಸವದ ಸೊಬಗನ್ನು ಇಮ್ಮಡಿಗೊಳಿಸಿದೆ.

3-0001

3-00001

3-002
ಇಡೀ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ ಸೀರೆಯಿಂದಲೇ ನಗರವನ್ನು ಶೃಂಗರಿಸಲಾಗಿದ್ದು, ಇದು ಪೊಳಲಿಯ ವಿಶೇಷತೆಯಾಗಿದೆ. ಇದರೊಂದಿಗೆ ಬ್ಯಾನರ್, ಬಂಟಿಗ್ಸ್‍ಗಳಿಂದ ನಗರವನ್ನು ಶೃಂಗರಿಸಲಾಗಿದೆ. ಬಂಟ್ವಾಳ-ಬಿ.ಸಿ.ರೋಡ್‍ನಿಂದ ಪೊಳಲಿ ದ್ವಾರದಿಂದ ಪೊಳಲಿಯವರೆಗೆ ಅದೇ ರೀತಿ ಗುರುಪುರ ದ್ವಾರದಿಂದ ಪೊಳಲಿಯನ್ನು ವಿಶೇಷ ರೀತಿಯಲ್ಲಿ ಶೃಂಗರಿಸಲಾಗಿದೆ. ಮೂಡಬಿದ್ರೆಯಿಂದ ಮಂಗಳೂರು, ಬಂಟ್ವಾಳ, ಬಿ.ಸಿ.ರೋಡ್ ಸೇರಿ ಹಲವು ಪ್ರದೇಶಗಳು ಸಂಪೂರ್ಣವಾಗಿ ಶೃಂಗಾರಗೊಂಡಿದ್ದು, ಭಕ್ತರನ್ನು ಬ್ರಹ್ಮಕಲಶೋತ್ಸವಕ್ಕೆ ಕೈಬೀಸಿ ಕರೆಯುವಂತೆ ಮಾಡಿದೆ.

By suddi9

Leave a Reply

Your email address will not be published. Required fields are marked *