ಬಂಟ್ವಾಳ : ಕಾನೂನು ಮಾಹಿತಿ ಕಾರ್ಯಾಗಾರವು ಯುವ ನ್ಯಾಯವಾದಿಗಳಿಗೆ ಅತ್ಯಗತ್ಯ. ಕಾನೂನಿನ ಜ್ಞಾನ ಈ ಮೂಲಕ ಹೆಚ್ಚುವುದು. ಹೊಸ ವಿಚಾರಗಳು ಮೂಡಿಬರಲು ಸಾಧ್ಯ. ತಿಂಗಳಿಗೆ ಒಮ್ಮೆಯಾದರೂ ಕಾರ್ಯಾಗಾರ ಮಾಡಿದಾಗ ಉತ್ತಮ ವಕೀಲರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಬಂಟ್ವಾಳ ತಾ| ಕಾನೂನು ಸೇವಾ ಸಮಿತಿ ಅಧ್ಯಕ್ಷರು, ಪ್ರಧಾನ ಹಿರಿಯ ನ್ಯಾಯಾ„ೀಶ ಮಹಮ್ಮದ್ ಇಮ್ತಿಯಾಜ್ ಅಹಮ್ಮದ್ ಹೇಳಿದರು.

0203btrbph14
ಅವರು ಮಾ.2ರಂದು ಬಿ.ಸಿ.ರೋಡ್ ಜೆಎಂಎಫ್‍ಸಿ ನ್ಯಾಯಾಲಯ ವಠಾರದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ವಕೀಲರ ಸಂಘ ಬಂಟ್ವಾಳ, ಅ„ವಕ್ತಾ ಪರಿಷತ್ ಬಂಟ್ವಾಳ, ತಾಲೂಕು ಕಾನೂನು ಸೇವೆಗಳ ಸಮಿತಿ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು.

ಅ„ವಕ್ತಾ ಪರಿಷತ್ ರಾಜ್ಯ ಉಪಾಧ್ಯಕ್ಷ ರವೀಂದ್ರನಾಥ ಪಿ.ಎಸ್.ಮಾತನಾಡಿ ಅ„ವಕ್ತಾ ಪರಿಷತ್ ನ್ಯಾಯವಾದಿಗಳ ಸಂಘಟನೆ. ರಾಜಕೀಯ ರಹಿತವಾಗಿ ಕರ್ತವ್ಯ ನಿರ್ವಹಿಸುವ ವ್ಯವಸ್ಥೆಯಾಗಿದೆ. ಇದರಲ್ಲಿ ನ್ಯಾಯವಾದಿಗಳಿಗೆ ಮಾತ್ರ ಸದಸ್ಯರಾಗಲು ಅವಕಾಶವಿದೆ. ತಮ್ಮ ಕಾನೂನಿನ ಜ್ಞಾನವನ್ನು ವಿನಿಮಯಕ್ಕೆ ಸಹಕಾರಿಯಾದ ಸಂಘಟನೆ ಎಂದು ಅಭಿಪ್ರಾಯ ನೀಡಿದರು.
ಎಲ್ಲ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಇಂತಹ ಕಾರ್ಯಕ್ರಮ ನಡೆಯಬೇಕು. ಇದರಿಂದ ಎಲ್ಲ ನ್ಯಾಯವಾದಿಗಳಿಗೆ ಇದರ ಪ್ರಯೋಜನ ಸಿಗುವುದಾಗಿ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ನ್ಯಾಯವಾದಿ ಪಿ. ಭಾನುಶಂಕರ್, ಕೆ. ರಮೇಶ್ ಉಪಾಧ್ಯಾಯ, ಹಿಂದು ಉತ್ತರಾ„ಕಾರಿ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.
ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬಂಟ್ವಾಳ ತಾ| ಕಾನೂನು ಸೇವಾ ಸಮಿತಿ ಕಾರ್ಯದರ್ಶಿ, ಹೆಚ್ಚುವರಿ ಸಿವಿಲ್ ನ್ಯಾಯಾ„ೀಶೆ ಪ್ರತಿಭಾ ಡಿ.ಎಸ್. , ಅ„ವಕ್ತಾ ಪರಿಷತ್ ದ.ಕ.ಜಿಲ್ಲಾಧ್ಯಕ್ಷ ಗುರುಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಅರುಣ್ ರೋಶನ್ ಡಿಸೋಜ ಉಪಸ್ಥಿತರಿದ್ದರು.
ನ್ಯಾಯವಾದಿ ಸುರೇಶ್ ಕುಮಾರ್ ನಾವೂರು ಸ್ವಾಗತಿಸಿ, ಅ„ವಕ್ತಾ ಪರಿಷತ್ ಸಂಚಾಲಕ ರಾಜಾರಾಂ ನಾಯಕ್ ವಂದಿಸಿದರು. ನ್ಯಾಯವಾದಿ ವೀರೇಂದ್ರ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *