ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ನಮ್ಮ ಹೆಮ್ಮೆಯ ಯೋಧರು ಪಾಕಿಸ್ತಾನದ ಮುಖ್ಯ ಉಗ್ರರ ಶಿಬಿರಗಳನ್ನು ಗುರಿಯಾಗಿಸಿ ಇಂದು ನಡೆಸಿದ ಸರ್ಜಿಕಲ್ ದಾಳಿಯ ಪ್ರಯುಕ್ತ ನಾವು ಇಂದು ಸಂಜೆ 6.30 ಗಂಟೆಗೆ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಹಮ್ಮಿಕೊಂಡ ಸಂಭ್ರಮಾಚರಣೆ. ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ರಾಘವೇಂದ್ರ ಪ್ರಭು ಕರ್ವಾಲು ಯೋಧರ ಪರಾಕ್ರಮದ ಬಗ್ಗೆ ಮಾತನಾಡಿದರು.
IMG_20190226_223200
ಜಗದೀಶ್ ಶೆಟ್ಟಿ, ಉದಯ ನಾಯ್ಕ್, ಶರೋಶ್ ಶೆಟ್ಟಿ, ಕಿರಣ್ ಭಟ್, ಶ್ರೀನಿವಾಸ್, ಶ್ರೀರಾಮ್, ಸುಧಾಕರ ಶೆಟ್ಟಿ, ಅಕ್ಷಯ್, ಚೇತನ್, ಪ್ರಕಾಶ್ ನಾಯಕ್, ಪಿ.ಎಸ್. ಕುಡ್ವಾ, ಜಿ.ಎನ್. ನಾಯಕ್, ಕೆ.ಆರ್. ಕಿಣಿ, ಮುಂತಾದವರು ಉಪಸ್ಥಿತರಿದ್ದರು.
ಹವ್ ಈಸ್ ದ ಜೋಶ್, ಭಾರತ್ ಮಾತಾ ಕೀ ಜೈ, ಜೈ ಹಿಂದ್ ಎಂಬ ಮುಗಿಲು ಮುಟ್ಟುವ ಘೋಷಣೆಗಳನ್ನು ನೆರೆದಿದ್ದ ದೇಶಪ್ರೇಮಿಗಳು ಹರ್ಷೋದ್ಗಾರದಿಂದ ಹಾಕಿದರು.

By suddi9

Leave a Reply

Your email address will not be published. Required fields are marked *