ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷದ್ ಮತ್ತು ಸಂಘ ಪರಿವಾರದ ವತಿಯಿಂದ ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೇಲೆ ಭಾರತದ ವಾಯುಪಡೆ ಸೈನಿಕ ದಾಳಿಗೆ ಸಂಭ್ರಮಾಚರಣೆ ಆಚರಿಸಲಾಯಿತು.
ವಿಶ್ವಹಿಂದೂ ಪರಿಷದ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ನಾಭ ಕಟ್ಟೆ, ಸಂಚಾಲಕ ಅಕ್ಷಯ ರಜಪೂತ್ ಕಲ್ಲಡ್ಕ, ಕಾರ್ಯದರ್ಶಿ ಚರಣ್ ಕಾಪುಮಜಲು, ಸಹ ಕಾರ್ಯದರ್ಶಿ ಗೋವರ್ಧನ್ ಕುಮಾರ್ , ವಿಟ್ಲ ಪಟ್ಟಣ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಅರುಣ್ ಎಂ, ಸಸದಸ್ಯರುಗಳಾದ ಶ್ರೀಕೃಷ್ಣ, ರಾಮದಾಸ ಶೆಣೈ ಮತ್ತು ಮಂಜುನಾಥ ಕಲ್ಲಕಟ್ಟ, ಬಿಜೆಪಿ ವಿಟ್ಲ ನಗರ ಅಧ್ಯಕ್ಷ ಮೋಹನದಾಸ ಉಕ್ಕುಡ, ಕಾರ್ಯದರ್ಶಿ ಉದಯ್ ಆಲಂಗಾರು, ಜಯಂತ ವಿಟ್ಲ, ಜಗದೀಶ ಪಾಣೆಮಜಲು, ಭಾರತೀಯ ಸೇನೆಯ ಸೈನಿಕ ಕಿಶೋರ್ ಪುಣಚ ಮೊದಲಾದವರು ಉಪಸ್ಥಿತರಿದ್ದರು.

