ಪುನರ್ ನಿರ್ಮಾಣಗೊಳ್ಳಲಿರುವ ವಿಟ್ಲ ಕಸ್ಬಾ ಗ್ರಾಮದ ಒಕ್ಕೆತ್ತೂರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಇರಂದೂರು ಇದರ ಶಿಲಾನ್ಯಾಸ ಸಂದರ್ಭದಲ್ಲಿ ಶ್ರೀ ಸತ್ಯವಿನಾಯಕ ಪೂಜೆ ನಡೆದ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾಶಿವ ಆಚಾರ್ಯ ಕೈಂತಿಲ ಅಧ್ಯಕ್ಷತೆವಹಿಸಿ ಜೀರ್ಣೋದ್ಧಾರದ ರೂಪುರೇಷೆ ನೀಡಿದರು.

SHV_0446
ಮುಖ್ಯ ಅತಿಥಿಗಳಾಗಿ ಜ್ಯೋತಿಷಿ ನಾರಾಯಣ ಭಟ್ ಕಾರ್ಕಳ, ಅಂತರಾಷ್ಟ್ರೀಯ ಕ್ರೀಡಾಪಟು ಅಶ್ವಿನ್ ನಾಯ್ಕ್, ವಿಟ್ಲ ಶ್ರೀಕೃಷ್ಣ ಧನ್ವಂತರಿ ಮಂದಿರದ ಕೇಶವ ಭಟ್, ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯದ ಮೇಲ್ವಿಚಾರಕಿ ಜಯಶ್ರೀ ಇವರು ಭಾಗವಹಿಸಿದ್ದರು. ಸೀತಾರಾಮ ಶೆಟ್ಟಿ ಒಕ್ಕೆತ್ತೂರು, ಶ್ರೀರಾಮ ಸಗ್ರಿತ್ತಾಯ, ಪದ್ಮನಾಭ ಗೌಡ ಮಂಜಲಾಡಿ, ರಾಘವ ಗೌಡ ಅಡ್ಡಾಳಿ ಮತ್ತು ಸಂಕಪ್ಪ ಗೌಡ ಕೈಂತಿಲ ವೇದಿಕೆಯಲ್ಲಿದ್ದರು.
ಪುರಂದರ ಇಂದ್ರಪಡ್ಪು ಆಶಯಗೀತೆ ಹಾಡಿದರು. ಎಂ ಕೆ ಕುಲಾಲ್ ಪ್ರಸ್ತಾವಿಸಿ ಸ್ವಾಗತಿಸಿದರು. ವೀರಪ್ಪ ಗೌಡ ರಾಯರಬೆಟ್ಟು ವಂದಿಸಿದರು. ಹರೀಶ್ ಎಸ್ ಪಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *