ಉಡುಪಿ :- ನೆಹರು ಯುವ ಕೇ೦ದ್ರ ಉಡುಪಿ ಜಿಲ್ಲೆ, ಗುರು ಯುವಕ ಸಂಘ ನೆಜಾರು ಇದರ ಆಶ್ರಯದಲ್ಲಿ ಫೆ.24ರಂದು ಸಂಕಲ್ಪದಿಂದ ಸಿದ್ಧಿ ಯುವ ಸಬಲೀಕರಣ ಕಾಯಾ೯ಗಾರ ಮಿಲಾಗ್ರೀಸ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾಯ೯ಕ್ರಮವನ್ನು ಜಿ.ಪಂ ಸದಸ್ಯ ಜನಾಧ೯ನ್ ತೊನ್ಸೆ ಉದ್ಘಾಟಿಸಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಡಾII ವಿನ್ಸ್oಟ್ ಆಳ್ಳ, ಅಧ್ಯಕ್ಷತೆ ವಹಿಸಿದ್ದರು.ತರಬೇತುದಾರರಾಗಿ ನಾಗರಾಜ್ ಜಿ.ಎಸ್, ಸಂತೋಷ್ ಜಿ, ಕರುಣಾಕರ ಜೈನ್, ರಾಘವೇ೦ದ್ರ ಪ್ರಭು ಕವಾ೯ಲು, ಭಾಗವಹಿಸಿದ್ದರು. ನೆಹರು ಯುವ ಕೇ೦ದ್ರ ಅಧಿಕಾರಿ ವಿಲ್ಫ್ಡಡ್ ಡಿಸೋಜ ಪ್ರಸ್ತಾವನೆಗೈದರು.ರವಿನoದನ್ ಸ್ವಾಗತಿಸಿದರು ಹರೀಶ್ ಕೋಟ್ಯಾನ್ ವoದಿಸಿದರು.ಸುಮಾರು 100 ಜನ ಭಾಗವಹಿಸಿದ್ದರು.

