ಎಡಪದವು: ಬಡಗ ಎಡಪದವು ಗ್ರಾಮ ಪಂಚಾಯತ್ ಇದರ ನೂತನ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಭೂಮಿಪೂಜೆಯನ್ನು ಮಂಗಳೂರು ನಗರ ಉತ್ತರ ಶಾಸಕರಾದ ಡಾ| ಭರತ್ ಶೆಟ್ಟಿ ವೈ ಇವರು ನೆರವೇರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ದನ ಗೌಡ, ಬಡಗ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತಾ ಶೆಟ್ಟಿಗಾರ್, ತೆಂಕ ಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ , ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ, ಮಾಜಿ ಗ್ರಾ.ಪಂ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ, ಪಂಚಾಯತ್ ಸದಸ್ಯರು, ಪಿ.ಡಿ.ಓ ಅಬ್ದುಲ್ ಅಸದ್, ಪಂಚಾಯತ್ ಸಿಬ್ಬಂದಿ ಸುದರ್ಶನ್ ಪೂಂಜಾ, ಸುಧಾಕರ್ ಪೂಂಜಾ, ಸದಾಶಿವ, ತಾರನಾಥ ಸಪಳಿಗ, ಹಿಮಕರ್ ಪೂಜಾರಿ, ವಸಂತ ಕಿಂಡೇಲು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

1902malali10

By Suddi9

Leave a Reply

Your email address will not be published. Required fields are marked *