ಬಂಟ್ವಾಳ: ಬಿಸಿರೋಡಿನ ಶ್ರೀ ಚಂಡಿಕಾಪರಮೇಶ್ವರೀ ದೇವಿ ದೇವಸ್ಥಾನ ದಲ್ಲಿ ಶ್ರೀ ದೇವಿಯ ವಾರ್ಷಿಕ ಜಾತ್ರ ಮಹೋತ್ಸವ ಫೆ.13 ರಿಂದ 15 ರವರೆಗೆ ನಡೆಯಿತು. ಬ್ರಹ್ಮ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಮೂರು ದಿನಗಳ ಕಾಲ ನಡೆಯಿತು. ಫೆ.15 ರಂದು ದರ್ಶನ ಬಲಿ ಉತ್ಸವ , ಬಟ್ಟಲು ಕಾಣಿಕೆ ಮತ್ತು ರಾಜಾಂಗಣ ಪ್ರಸಾದ ನಡೆಯಿತು. ಬಳಿಕ ಮಧ್ಯಾಹ್ನ ನವಕಲಾಶಭಿಷೇಕ, ಮಹಾಪೂಜೆ , ಮಂತ್ರಾಕ್ಷತೆ ಪ್ರಸಾದ ವಿತರಣೆ ನಡೆಯಿತು.


