ಗುರುಪುರ : ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಗುರುಪುರ ಪೇಟೆ, ಬ್ಲಡ್ ಹೆಲ್ಫ್ಲೈನ್ ಕರ್ನಾಟಕ(ರಿ) ಜಂಟಿ ಆಶ್ರಯದಲ್ಲಿ ಎ.ಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಭಾಗಿತ್ವದಲ್ಲಿ ಭಾನುವಾರ ಗುರುಪುರ ಪೇಟೆಯ(ಸೊಸೈಟಿ ಮುಂಭಾಗ) ಮಿಲನ್ ಕಂಪೌಂಡಿನಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ನೂರಾರು ಮಂದಿ ರಕ್ತದಾನ ನೀಡಿ, ಸಮಾಜಸೇವೆಗೈದರು.
ಬ್ಲಡ್ ಹೆಲ್ಫ್ಲೈನ್ ಕರ್ನಾಟಕದ ಸಲಹೆಗಾರ ಮುಸ್ತಫ ಅಡ್ಡೂರು ಕಾರ್ಯಕ್ರಮ ಉದ್ಘಾಟಿಸಿದರು. ಗುರುಪುರ ದಾರುಸ್ಸಲಾಂ ಜುಮ್ಮಾ ಮಸೀದಿ ಖತೀಬ ಡಿ. ಅಬ್ಬಾಸ್ ಫೈಝಿ ಆಶೀವಚನ ನೀಡಿದರು. ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಗುರುಪುರ ಅಧ್ಯಕ್ಷ ಅಝರ್ ಎಂ ಎಸ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹಾಜಿ ಶಾಹುಲ್ ಹಮೀದ್ ಮೆಟ್ರೋ, ಅಬ್ದುಲ್ ಅಝೀಝ್ ಬಾಷಾ, ಜಿ ಎಂ ಇಕ್ಬಾಲ್ ಮಿಲನ್, ಗುರುಪುರ ಗ್ರಾಪಂ ಉಪಾಧ್ಯಕ್ಷ ಜಿ ಎಂ ಉದಯ ಭಟ್, ಹಾಜಿ ಶೇಕಬ್ಬ ಡಿ ಎಸ್, ರಿಯಾಝ್ ಮಿಲನ್, ದಾವೂದ್ ಬಂಗ್ಲೆಗುಡ್ಡೆ, ಎ.ಜೆ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ಮೊದಲಾದವರಿದ್ದರು.
