ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ, ಜನಪರವಾದ ಬಜೆಟ್ ಮಂಡಿಸಿದ್ದಾರೆ. ಈ ಯೋಜನೆಗಳು ಜನರಿಗೆ ತಲುಪುವಲ್ಲಿ ಕಾರ್ಯಕರ್ತರ ಶ್ರಮ ಅತ್ಯಗತ್ಯ. ಹಾಗಾಗೀ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಮೊದಲು ಗ್ರಾಮದ ಅಭಿವೃದ್ಧಿ ಯಾಗಬೇಕು. ಪ್ರತಿ ಮನೆಮನೆಗಳಿಗೂ ಯೋಜನೆಗಳು ತಲುಪುವ ದೃಷ್ಟಿಯಿಂದ ಕೆಲಸ ಮಾಡಬೇಕು ಎಂದು ಬಂಟ್ವಾಳ ಶಾಸಕ ಉಳಿಪ್ಪಾಡಿಗುತ್ತು ರಾಜೇಶ್ ನಾಯ್ಕ್ ಕರೆ ನೀಡಿದರು.

ಅವರು ರವಿವಾರ ಕಳ್ಳಿಗೆ ಗ್ರಾಮದ ಪನ್ನಡ್ಕ ಪರಿಸರದಲ್ಲಿ ನೂತನ ಕೊಳವೆಬಾವಿ ಸಂಪರ್ಕವನ್ನು ಉದ್ಘಾಟಿಸಿ ಮಾತನಾಡಿದ ಅವರು.ಕಳ್ಳಿಗೆ ಗ್ರಾಮದಲ್ಲಿ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಆಯುಷ್ಮಾನ್ ಯೋಜನೆಯ ಅನುಮೋದನಾ ಪತ್ರ ತಲುಪಿದೆ . ಮುಂದಿನ ದಿನಗಳಲ್ಲಿ ಉಳಿದ ಫಲಾನುಭವಿಗಳಿಗೂ ಪತ್ರ ಅಂಚೆ ಕಚೇರಿ ಮೂಲಕ ತಲುಪಲಿದೆ ಎಂದರು. ಈ ಪತ್ರದ ಜೊತೆಗೆ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕೊಂಡುಹೋಗಿ ಅಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಕಾರ್ಡ್ ಪಡೆದರೆ ಮಾತ್ರ ಬಿಪಿಎಲ್ ಕಾರ್ಡ್ ದಾರರಿಗೆ ಸಂಪೂರ್ಣ ಉಚಿತ ಹಾಗೂ ಎಪಿಎಲ್ ಕಾರ್ಡ್ ದಾರರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರಕುವುದು. ಶೀಘ್ರದಲ್ಲೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲೂ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉಜ್ವಲ ಯೋಜನೆಯಡಿ ಕಳ್ಳಿಗೆ ಗ್ರಾಮದಲ್ಲಿ ಈಗಾಗಲೇ 35ಕ್ಕೂ ಅಧಿಕ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ವಿತರಣೆಯಾಗಿದೆ. ಉಳಿದ ಫಲಾನುಭವಿಗಳಿಗೆ ಕೆಲವೇ ದಿನಗಳಲ್ಲಿ ಉಜ್ವಲ ಯೋಜನೆ ಕಿಟ್ ವಿತರಣೆಯಾಗಲಿದೆ ಎಂದ ಅವರು,ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಹಳ್ಳಿಯಲ್ಲಿ ಪ್ರತಿಯೊಂದು ಮನೆಯವರು ಉದ್ಯೋಗ ಕಾರ್ಡ್ ಮಾಡಿಸಬೇಕು. ಈ ಯೋಜನೆಯ ಮೂಲಕ ನಮ್ಮ ಗ್ರಾಮದ ರಸ್ತೆಗಳನ್ನು ನಾವೇ ದುರಸ್ತಿ ಮಾಡಬಹುದು ಎಂದರು. ಗ್ರಾಮಸ್ಥರು ಹಲವು ಸಮಸ್ಯೆಗಳ ಬಗ್ಗೆ ಶಾಸಕರ ಗಮನಸೆಳೆದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಳ್ಳಿಗೆ ಗ್ರಾಪಂ ಪಿಡಿಒ ಶಿವುಲಾಲ್ ಚವಾಣ್, ಪಂಚಾಯತ್ ಸದಸ್ಯರಾದ ಯಶೋದಾ ಜಾರಂದಗುಡ್ಡೆ, ರೇವತಿ ಮಾಡಂಗೆ, ಮಾಜಿಸದಸ್ಯರಾದ ದಯಾನಂದ ಜಾರಂದಗುಡ್ಡೆ, ಪುರುಷೋತ್ತಮ ಕೊಟ್ಟಾರಿ ಮಾಡಂಗೆ, ಬಿಜೆಪಿ ಸಜಿಪಮುನ್ನೂರು ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಮನೋಹರ ಕಂಜತ್ತೂರು, ಕಳ್ಳಿಗೆ ಬಿಜೆಪಿ ಶಕ್ತಿಕೇಂದ್ರ ಪ್ರ.ಕಾರ್ಯದರ್ಶಿ ನವೀನ್ ಪೆರಿಯೋಡಿಬೀಡು, ಬಿಜೆಪಿ ಮುಖಂಡರಾದ ಮನೋಜ್ ವಳವೂರು, ಪ್ರದೀಪ್ ಶೆಟ್ಟಿ ಬ್ರಹ್ಮರಕೂಟ್ಲು, ರಾಹುಲ್ ಪಚ್ಚಿನಡ್ಕ, ಸುಮಿತ್ ಪಚ್ಚಿನಡ್ಕ, ಯೋಗೀಶ್ ದರಿಬಾಗಿಲು, ವಿಶ್ವನಾಥ ದಾಸರಕೋಡಿ, ನವೀನ್ ಪನ್ನಡ್ಕ, ಅಮ್ಟಾಡಿ ಗ್ರಾಪಂ ಸದಸ್ಯ ಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Attachments area
