ಗುರುಪುರ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ), ಧೂಮಾವತಿ, ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಫೆ. 3 ರಂದು ಕುಡುಪು ತಂತ್ರಿಗಳ ನೇತೃತ್ವದಲ್ಲಿ ದೇವತಾಪ್ರಾರ್ಥನೆ ಗಣಪತಿ ಹೋಮ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮತ್ತು ಗುತ್ತನವರಿಂದ ಹೊರೆಕಾಣಿಕೆಯ ಆಗಮನದೊಂದಿಗೆ ಹೊರೆಕಾಣಿಕೆಗೆ ಚಾಲನೆದೊರೆಯಿತು.
ಇದಕ್ಕಿಂತ ಮುಂಚೆ ದೈವಸ್ಥಾನದ ಪ್ರಧಾನ ದೈವ ಪಾತ್ರಿಗಳಾದ ಚಂದ್ರಹಾಸ ಪೂಜಾರಿ ಮತ್ತು ತನಿಯಪ್ಪ ಪೂಜಾರಿ ಉಪಸ್ಥಿತಿಯಲ್ಲಿ ದೈವಗಳ ಭಂಡಾರದ ಮೆನೆಯಲ್ಲಿ ವಿಶೇಷ ಪ್ರಾರ್ಥನೆ ನೆರವೇರಿತು.ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ರಾವಿರಾಜ ಶೆಟ್ಟಿ, ರಂ ಪುರುಷೋತ್ತಮ ಮಲ್ಲಿ, ಕೋಶಾಧಿಕಾರಿಗಳಾದ ಪುರಂದರ ಮಲ್ಲಿ, ಯಶವಂತ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ಕಿಟ್ಟಣ್ಣ ರೈ, ರಾಜು ಎನ್ ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಸದಾಶಿವ ಸಾಲ್ಯಾನ್, ರವೀಂದ್ರ ಶೆಟ್ಟಿ, ಶೆಡ್ಡೆ ಮಂಜುನಾಥ ಭಂಡಾರಿ, ಉಮೇಶ ಮುಂಡ, ದಾಮೋದರ ನಿಸರ್ಗ, ಸದಾನಂದ ಗಾಂಭೀರ್, ಪ್ರೇಮನಾಥ ಮಾರ್ಲ, ಚಂದ್ರಹಾಸ ಕಾವ, ಸತೀಶ್ ಕಾವ, ನಳಿನಿ ಶೆಟ್ಟಿ, ರವಿ ಶಟ್ಟಿ ಕತಾರ್, ಯತಿರಾಜ ಶೆಟ್ಟಿ, ಸುದರ್ಶನ ಶೆಟ್ಟಿ ಪೆರ್ಮಂಕಿ ಮೊದಲಾದವರಿದ್ದರು.
ಬಳಿಕ ಸಾವಿರಾರು ಮಂದಿ ಭಕ್ತರಿಗೆ ಮಹಾ-ಅನ್ನ ಸಂತರ್ಪಣೆ ಜರುಗಿತು. ಸಂಜೆ ಗುರುಪುರದ ಜಂಗಮ ಮಠ, ಸದಾಶಿವ ದೇವಸ್ಥಾನ, ವರದರಾಜ ವೆಂಕಟರಮಣ ದೇವಸ್ಥಾನದಿಂದ ದೈವಸ್ಥಾನಕ್ಕೆ ಹಸಿರು ಹೊರೆಕಾಣಿಕೆ ಹಾಗೂ ವಾಮಂಜೂರು ಶ್ರೀ ರಾಮ ಭಜನಾ ಮಂದಿರದಿಂದ ಅದ್ದೂರಿ ಮೆರವಣಿಗೆಯಲ್ಲಿ ದೈವಗಳ ಹೊಸ ಮಂಚ ಮೆರವಣಿಗೆ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತರಲಾಗುವುದು.
Post navigation