ಗುತ್ತು ನಿಮಗೆಷ್ಟು ಗೊತ್ತು ವಿಚಾರಗೋಷ್ಠಿ
ಗುರುಪುರ: ಗುತ್ತು ಪರಂಪರೆಗಳು ನಮ್ಮಿಂದಲೇ ನಾಶಗೊಳ್ಳುತ್ತಾ ಬರುತ್ತಿದೆ. ಇಂದಿನ ರಾಜಕೀಯ ಸ್ಥಿತಿಯಿಂದಾಗಿ ಧರ್ಮದ ಚಿಂತನೆ ಕಡಿಮೆಯಾಗುತ್ತಿದೆ. ನಾವೆಲ್ಲಾ ಏಕ ಮನಸ್ಸಿನಿಂದ ಒಗ್ಗಟ್ಟಾಗಿ ಗುತ್ತು-ಬಾವ-ಬೀಡು-ಪರಡಿಗಳನ್ನು ಉಳಿಸಿ ಇವುಗಳ ಪುನರುತ್ಥಾನಕ್ಕೆ ನಾವೆಲ್ಲಾ ಶ್ರಮಿಸಬೇಕು. ಗಡಿಕಾರರಾಗಲು ಹೆದರುವುದು ಬೇಡ. ಸಮಾಜವನ್ನು ತಿದ್ದಿ, ಧೈರ್ಯದಿಂದ ಬದುಕೋಣ. ಭಾರತವನ್ನು ವಿಶ್ವಗುರುವನ್ನಾಗಿಸಬೇಕು ಎಂದು ತಿಮರೋಡಿ ಬೀಡಿನ ಮಹೇಶ್ ಶೆಟ್ಟಿ ಹೇಳಿದರು.
ಅವರು ಗುರುಪುರ ಗೋಳಿದಡಿಗುತ್ತಿನ ಗುತ್ತುದ ವರ್ಸೊದ ಪರ್ಬೊದ ಅಂಗವಾಗಿ ಶ್ರೀ ಮಹಾಕಾಲೇಶ್ವರ ವೇದಿಕೆಯಲ್ಲಿ ನಡೆಯುತ್ತಿರುವ ಗುತ್ತು ನಿಮಗೆಷ್ಟು ಗೊತ್ತು ಎನಮ್ನುವ ವಿಚಾರಗೋಷ್ಠಿಯಲ್ಲಿ ಗುತ್ತು-ಬೀಡು-ಬಾವ-ಪರಡಿಗಳು ಒಂದು ಚಿಂತನೆ ವಿಚಾರದಲ್ಲಿ ಧಾರ್ಮಿಕ ವಿಚಾರದಲ್ಲಿ ವಿಚಾರ ಮಂಡನೆ ನಡೆಸಿ ಮಾತನಾಡುತ್ತಿದ್ದರು.

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ, ಈ ತುಳುನಾಡು ಸಾಕಷ್ಟು ಬದಲಾಗಿದೆ. ಯುವಕರು ದೇಶ ವಿದೇಶಗಳಲ್ಲಿ ನೆಲೆಸುತ್ತಿದ್ದಾರೆ. ಊರಿಗೆ ಬಂದಾಗ ನಮ್ಮ ಸಂಸ್ಕøತಿಯನ್ನು ಉಳಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಸಂಸ್ಕøತಿಯನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ನುಡಿದರು.
ಈ ವೇಳೆ ಪ್ರಶ್ನೋತ್ತರ ನಡೆದು ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಸೂಕ್ತ ಉತ್ತರ ನೀಡಿದರು. ಗೋಳಿದಡಿಗುತ್ತಿನ ವರ್ಧಮಾನ್ ದುರ್ಗಾಪ್ರಸಾದ್ ಶೆಟ್ಟಿ ಈ ವೇಳೆ ಮಾತನಾಡಿದರು.
ಒಟ್ಟು ಚಿಂಥನ-ಮಂಥನದ ನಿರ್ಣಯ ಮಂಡನೆ ಮತ್ತು ಅಂಗೀಕಾರ ನಡೆಸಿ, ನಿರ್ಣಯವನ್ನು ಮಂಡಿಸಲಾಯಿತು. ವಿಚಾರಗೋಷ್ಠಿಗೆ ಸಹಕಾರ ನೀಡಿದ ಸರ್ವರಿಗೂ ಗೌರವಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಸಾಮಾಜಿಕ ಮುಂದಾಳು ಹರಿಕೃಷ್ಣ ಬಂಟ್ವಾಳ, ಜಗದೀಶ್ ಅಧಿಕಾರಿ ಮೂಡಬಿದಿರೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಲವರನ್ನು ಸಮ್ಮಾನಿಸಲಾಯಿತು.
