ಗುರುಪುರ: ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದರ ಮಾರ್ಗದರ್ಶನದಲ್ಲಿ ಫಲ್ಗುಣಿ ನದಿ ತಟಕಾದ ಮಹಾಕಾಲೇಶ್ವರ ಪ್ರಾಂಗಣದಲ್ಲಿ ಶ್ರೀ ರುದ್ರ ಹೋಮ ಆರಂಭಗೊಂಡು ಬೆಳಿಗೆಗ 10 ಗಂಟೆಗೆ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು. ಬಳಿಕ ಆಯಾಯ ವಿಚಾರಕ್ಕೆ ಸಂಬಂಧಿಸಿ ವಿಚಾರಗೋಷ್ಠಿಗಳು ಆರಂಭಗೊಂಡಿತು.ಆಯಾಯ ಕ್ಷೇತ್ರದ ವಿದ್ವಾಂಸರು ಗುತ್ತು-ಬೀಡು-ಬಾವ-ಪರಡಿ ವಿಚಾರಗಳ ಬಗ್ಗೆ ವಿಚಾರ ಮಂಡನೆ ನಡೆಯುತ್ತಿದೆ.
ವಿಚಾರಗೋಷ್ಠಿಯಲ್ಲಿ ಉಪಸ್ಥಿತರಿರುವ ಗುತ್ತು-ಬೀಡು-ಬಾವ-ಬಾರಿಕೆ- ಮತ್ತು ಪರಡಿ ಮನೆತನಗಳ ಗಡಿಕಾರರಿಗೆ, ಮುಕ್ಕಾಲ್ದಿಗಳಿಗೆ, ಪ್ರತಿನಿಧಿಗಳಿಗೆ ಬ್ರಹ್ಮಶ್ರೀ ಶಿರೋಮಣಿ ಕೆ.ಎಸ್. ನಿತ್ಯಾನಂದ ಅವರು, ಅಕ್ಕಿ ಮುಡಿ ಕಟ್ಟುವ ಕೊದಂಟಿ, ನಾರಿಕೇಳದೊಂದಿಗೆ ಉಪಚರಿಸಿ, ಪೇಟ ತೊಡಿಸಿ ಗೌರವ ಸಮರ್ಪಿಸಿದರು.
ಈ ವೇಳೆ ಗುತ್ತಿನವರು ತಮ್ಮ ಗುತ್ತಿನ ಬಗ್ಗೆ ಪರಿಚಯ ಮಾಡಿದರು. ಈ ವೇಳೆ ಗೋಳಿದಡಿಗುತ್ತು ವರ್ಧಮಾನ ಶೆಟ್ಟಿ, ಜಗದೀಶ್ ಅಥಿಕಾರಿ, ವಿದ್ವಾಂಸರಾದ ಡಾ.ವೈ.ಎನ್. ಪಡುಬಿದ್ರಿ, ಕೆ.ಎಲ್. ಕುಂಡಂತ್ತಾಯ ಮತ್ತಿತರರು ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಅವರು ನಿರೂಪಿಸಿದರು.


