ಗುರುಪುರ: ಶ್ರೀ ಅಯ್ಯಪ್ಪ ಭಕ್ತವೃಂದ ಪೆರ್ಮಂಕಿ ಇದರ 22ನೇ ವರ್ಷದ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಇತ್ತೀಚೆಗೆ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.  ಕಾರ್ಯಕ್ರಮದ ಅಂಗವಾಗಿ ಗಣಹೋಮ, ನಾಗದೇವರಿಗೆ ಅಶ್ಲೇಷ ಪೂಜೆ, ಅಯ್ಯಪ್ಪ ಸ್ವಾಮಿಗೆ ದೀಪೋತ್ಸವ, ಸದಾಶಿವ ದೇವರಿಗೆ ರಂಗಪೂಜೆ, ಸ್ವಾಮಿಗಳ ಇರುಮುಡಿ ಕಟ್ಟುವುದು ಹಾಗೂ ಶ್ರೀಲಲಿತೆ ತಂಡದವರಿಂದ ತಿರುಪತಿ ತಿಮ್ಮಪ್ಪ ತುಳುನಾಟಕ ಮತ್ತು ಕಟೀಲು ಮೇಳದವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ನಡೆಯಿತು.

permanki
ಈ ವೇಳೆ ಶಬರಿಮಲೆಗೆ 25ನೇ ವರ್ಷ ಯಾತ್ರೆ ಮಾಡುವ ಗುಣಾಕರ ಸಾಲ್ಯಾನ್ ಹಾಗೂ ಲೋಕೇಶ್ ಪೂಜಾರಿ ಕರ್ಮಲಚ್ಚಿಲ್ ಇವರನ್ನು ಅನಂತರಾಮ ಭಟ್ ಪೆರ್ಮಂಕಿ ಇವರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು. ಈ ವೇಳೆ ಅಧ್ಯಕ್ಷರಾದ ಪೆರ್ಮಂಕಿಗುತ್ತು ಕಿರಣ್ ಪಕ್ಕಳ, ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವಸಂತಪೂಜಾರಿ ಪೆರ್ಮಂಕಿ, ಲಕ್ಷ್ಮೀಪ್ರಸಾದ್ ಪಕ್ಕಳ, ಸಲ್ಲಾಜೆ ರಾಜೀವ ಶೆಟ್ಟಿ, ಮೊಕ್ತೇಸರರಾದ ಪದ್ಮನಾಭ ಶೆಟ್ಟಿ ಪೆರ್ಮಂಕಿಗುತ್ತು, ನಿತಿನ್ ಕರ್ಮಲಚ್ಚಿಲ್, ದಿಶಾಂತ್. ವಿಶ್ವಮಾಥ ಪೆರ್ಮಂಕಿ ಹಾಗೂ ಅಯ್ಯಪ್ಪ ಭಕ್ತವೃಂದದ ಎಲ್ಲಾ ಪದಾದಿಕಾರಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *