ಸುದ್ದಿ9ಕೈಕಂಬ:ಕಾರ್ಮಿಕರ ಹಾಗೂ ಅವರ ಕುಟುಂಬಕ್ಕೆ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಕಾರ್ಮಿಕರ ಕಲ್ಯಾಣ ಮಂಡಳಿಯ ಗುರಿಯಾಗಿದೆ.ಕಟ್ಟಡ ನಿಲ್ದಾಣಕ್ಕೆ
ಸಂಬಂಧಿಸಿ ಕೆಲಸ ಮಾಡುವ ಎಲ್ಲಾ ವರ್ಗದ ಕಾರ್ಮಿಕರು ಮತ್ತು ಇತರ ನಿರ್ಮಾಣ ಕೆಲಸಗಳಾದ ರಸ್ತೆ ರಚನೆ ಚರಂಡಿ ರಚನೆ ಅಣೆಕಟ್ಟು ರಚನೆ, ರೈಲ್ವೆಯ ವಿವಿಧ ಹಂತದ ಕಾಮಗಾರಿ, ವಿಮಾನ ನಿಲ್ದಾಣದ ಕಾಮಗಾರಿ ಹಾಗೂ ಉದ್ಯೋಗ ಖಾತರಿ ಯೋಜನೆಯಲ್ಲಿ ತೊಡಗಿಸಿದ ಕಾರ್ಮಿಕರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿ ಕರ ಕಲ್ಯಾಣ ಮಂಡಳಿಯಿಂದ ಸೌಲಭ್ಯ ಪಡೆಯಲು ಅರ್ಹರು.ನಮ್ಮ ಇಲಾಖೆಯಲ್ಲಿ ಗುರುತು ಚೀಟಿ ಮಾಡಿಕೊಡಲಾಗುವುದು. ಕಾರ್ಮಿಕರು ನೇರವಾಗಿ ಬೆಂದುರ್ ವೆಲ್ ನ ನಮ್ಮ ಇಲಾಖೆಗೆ ಅರ್ಜಿ ಸಲ್ಲಿಸಬಹುದು.ಗುರುತಿನ ಚೀಟಿ ಹೊಂದಿದವರಿಗೆ ಪಿಂಚಣಿ,ವೈದ್ಯಕೀಯ, ಮದುವೆ ಕರ್ಚು ,ಶೈಕ್ಷಣಿಕ ಸಹಾಯ ಸಿಗುತ್ತದೆ. ಎಂದು ಮಂಡಳಿಯ ಮಂಗಳೂರು ವಿಭಾಗದ ಕಾರ್ಮಿಕ ಸಹಾಯಕ ಆಯುಕ್ತರಾದ .ಡಿ.ಜಿ.ನಾಗೇಶ್ ಹೇಳಿದರು.
ಅವರು ದಿಶಾ ಟ್ರಸ್ಟ್ ಮತ್ತು ನೇಸರ ಕೇಂದ್ರ ಸಮಿತಿ ಕೈಕಂಬ ಇವರ ಜಂಟಿ ಆಶ್ರಯದಲ್ಲಿ ನಡೆದ ಕಾರ್ಮಿಕ ಇಲಾಖೆಯಿಂದ ದೊರೆಯುವ ಸೌಲಭ್ಯಗಳು ಮಾಹಿತಿ ಕಾರ್ಯಗಾರದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ದಿಶಾ ಟ್ರಸ್ಟ್ ನ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ಸಭಾ ಅಧ್ಯಕ್ಷತೆ ವಹಿಸಿದ್ದರು. ನೇಸರ ಕೇಂದ್ರ ಸಮಿತಿಯ ಅಧ್ಯಕ್ಷರಾದ ಫ್ರಾನ್ಸಿಸ್ ಲೋಬೋ ಕಾರ್ಯದರ್ಶಿ ಮೋಹಿನಿ, ಸ್ಪಂದನ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಅನುಸೂಯ ಕಾಜವ, ಕಾರ್ಯದರ್ಶಿ ಸವಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿಶಾ ಸಂಸ್ಥೆಯ ಸಂಯೋಜಕರಾದ ಹೆನ್ರಿವಾಲ್ಡರ್ ಪ್ರಾಸ್ತವಿಕವಾಗಿ ಮಾತನಾಡಿದರು. ರುದೇಶ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿ, ಫ್ರಾನ್ಸಿಸ್ ಲೋಬೋ ಸ್ವಾಗತಿಸಿ, ಸುಮಂಗಲ ವಂದಿಸಿದರು.

