ಮೂಡುಬಿದಿರೆ: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ವಿದ್ಯಾರ್ಥಿ ಗೌತಮ್ನ ಚಿಕಿತ್ಸೆಗಾಗಿ ಮೂಡುಬಿದಿರೆಯ ಯುವಮಿಲನ ಸಂಘಟನೆಯು ರೂ.25 ಸಾವಿರ ಆರ್ಥಿಕ ನೆರವು ನೀಡಿ ಸಹಕರಿಸಿದೆ.

ಈ ಸಂದರ್ಭದಲ್ಲಿ ಯುವಮಿಲನ ಸಂಘಟನೆಯ ಅಧ್ಯಕ್ಷ ಶ್ರೀನಿತ್ ಶೆಟ್ಟಿ ಮಾರ್ನಾಡು, ಉಪಾಧ್ಯಕ್ಷೆ ರೂಪ ಬಲ್ಲಾಳ್, ಸದಸ್ಯರಾದ ಅಮೃತನಾಯ್ಕ್, ರಾಕೇಶ್, ಪ್ರಜ್ವಲ್, ಅಮೃತ್, ರೀತಿಲ್, ರಂಜಿತ್, ಇರುವೈಲು ವಿಷ್ಣು ಮತ್ತಿತರರು ಉಪಸ್ಥಿತರಿದ್ದರು.
