ಬಂಟ್ವಾಳ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂಟ್ವಾಳ ಇದರ ಆಡಳಿತದ ಕೊನೆಯ 20 ತಿಂಗಳ ಅವಗೆ ಸೆ. 11ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಾಂತಪ್ಪ ಪೂಜಾರಿ ಕಡೇಶ್ವಾಲ್ಯ, ಉಪಾಧ್ಯಕ್ಷರಾಗಿ ಅಮ್ಮುಂಜೆ ಸಂಪತ್ ಕುಮಾರ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಐದು ವರ್ಷಗಳ ಅವದಿಯ ಆಡಳಿತದ ಮೊದಲ ಅವದಿಯಲ್ಲಿ ರೊನಾಲ್ಡ್ ಡಿ’ಸೋಜ ಅಧ್ಯಕ್ಷ, ಕೃಷ್ಣಪ್ಪ ಉಪಾಧ್ಯಕ್ಷರಾಗಿದ್ದರು. ಎರಡನೇ ಅವದಿಗೆ ಬಿ.ನೇಮಿರಾಜ ರೈ ಅಧ್ಯಕ್ಷರಾಗಿದ್ದು ಪ್ರೇಮ ಉಪಾಧ್ಯಕ್ಷರಾಗಿದ್ದರು.
ಎರಡನೇ ಅವದಿಯ ಅಧ್ಯಕ್ಷ ಉಪಾಧ್ಯಕ್ಷರ ಸೇವಾ ಅವದಿ ಸೆ. 15ಕ್ಕೆ ಮುಕ್ತಾಯಗೊಳ್ಳಲಿದೆ.ಇದಕ್ಕಾಗಿ ನೂತನ ಪದಾಕಾರಿಗಳ ಆಯ್ಕೆ ನಡೆದಿತ್ತು. ಬಂಟ್ವಾಳ ತಹಶೀಲ್ದಾರ್ ಬಿ.ಎಸ್. ಮಲ್ಲೇಸ್ವಾಮಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಸಂದರ್ಭ ಸದಸ್ಯರಾದ ರತ್ನ ಕುಮಾರ್ ಚೌಟ, ಶ್ರೀನಿವಾಸ ರೈ, ನಾಮ ನಿರ್ಧೇಶಿತ ಸದಸ್ಯ ಜಯ ಬಂಗೇರ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ. ಆನಂದ, ಪ್ರ.ಕಾರ್ಯದರ್ಶಿಗಳಾದ ರಾಮ್ ದಾಸ್ ಬಂಟ್ವಾಳ ಮತ್ತು ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.
ಬಂಟ್ವಾಳ ಎಪಿಎಂಸಿ ಚುನಾಯಿತ ಸದಸ್ಯರಾಗಿ ಬಿಜೆಪಿಯ 8 ಮಂದಿ, ಕಾಂಗ್ರೆಸಿನ 4 ಮಂದಿ, ನಾಮ ನಿರ್ಧೇಶಿತ ಸದಸ್ಯರಾಗಿ 3 ಮಂದಿಯನ್ನು ಹೊಂದಿದೆ.


