ಬೀಡಿ ಕಾಮರ್ಿಕರ ಪ್ರತಿಭಟನೆ:ವಾರ ಪೂತರ್ಿ ಕೆಲಸ ನೀಡಲು ಆಗ್ರಹ11 c p i  m 2

11c p i m
ಸುದ್ದಿ9ಮಂಗಳೂರು:ಬೀಡಿ ಕಾಮರ್ಿಕರಿಗೆ ವಾರಪೂತರ್ಿ ಕೆಲಸ ನೀಡುವಂತೆ ಕಂಪೆನಿಗಳಿಗೆ ಸೂಚಿಸಬೇಕು ಹಾಗೂ
ಬೀಡಿ ಉದ್ಯಮ ಮತ್ತು ಕಾಮರ್ಿಕರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರತ್ನಿಸಬೇಕು
ಎಂಬಿತ್ಯಾದಿ ಬೇಡಿಕೆಗಳಿಗೆ ಒತ್ತಾಯಿಸಿ ಎಸ್.ಕೆ.ಬೀಡಿ ವರ್ಕರ್ಸ್ ಫೆಡರೇಶನ್(ಎಐಟಿಯುಸಿ)ನೇತೃತ್ವದಲ್ಲಿ ಮಂಗಳವಾರ
ನಗರದ ಬೆಂದೂರ್ವೆಲ್ನ ಸಹಾಯಕ ಕಾಮರ್ಿಕ ಆಯುಕ್ತರ ಕಛೇರಿ ಎದುರು ಬೀಡಿ ಕಾಮರ್ಿಕರ ಪ್ರತಿಭಟನೆ ನಡೆಯಿತು.
ಎಐಟಿಯುಸಿ ಪ್ರಧಾನ ಕಾರ್ಯದಶರ್ಿ ವಿ.ಸೀತಾರಂ ಬೇರಿಂಜ ಮಾತನಾಡಿ ಜಿಲ್ಲೆಯ ಆಥರ್ಿಕತೆಗೆ ಬೀಡಿ ಉದ್ಯಮ ಮಹತ್ತರ
ಕೊಡುಗೆ ನೀಡಿದೆ.ಜಿಲ್ಲೆಯಲ್ಲಿ ಸುಮಾರು 4ಲಕ್ಷಕ್ಕಿಂತಲೂ ಅಧಿಕ ಕಾಮರ್ಿಕರು ಬೀಡಿ ಉದ್ಯಮವನ್ನು ಅವಲಂಬಿಸಿದ್ದಾರೆ.
ಮಹಿಳೆಯರು ಆಥರ್ಿಕವಾಗಿ ಸಬಲರಾಗುವಲ್ಲಿ ಬೀಡಿ ಉದ್ಯಮದ ಕೊಡುಗೆ ಅನನ್ಯ. ಬೀಡಿ ಕಾಮರ್ಿಕರ ಮಕ್ಕಳ
ವಿದ್ಯಾಭ್ಯಾಸ ಹಾಗೂ ಕುಟುಂಬದ ಆಥರ್ಿಕತೆಯ ಬೆನ್ನೆಲುಬಾಗಿರುವ ಬೀಡಿ ಉದ್ಯಮವನ್ನು ಸರಕಾರ ಹಾಗೂ ಬೀಡಿ
ಮಾಲಕರು ಅವನತಿಯತ್ತ ಕೊಂಡೊಯ್ಯುವ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದರು.
ಇದೀಗ ಬೀಡಿ ಕಂಪೆನಿಗಳು ಬೀಡಿಗಳು ಮಾರಾಟವಾಗುತ್ತಿಲ್ಲ ಎಂಬ ಸುಳ್ಳು ಕಾರಣ ನೀಡಿ ಕಾಮರ್ಿಕರಿಗೆ ಕೆಲಸ ಕಡಿತಗೊಳಿಸುವ
ಮೂಲಕ ವಾರದಲ್ಲಿ 2-3 ದಿನ ಮಾತ್ರ ಕೆಲಸ ನೀಡಲಾಗುತ್ತಿದೆ.ಆದರೆ ಲೇಬಲ್ ಹೊಡೆಯುವವರಿಗೆ ಮಾತ್ರ
ಕೆಲಸವಿದ್ದು ಕೆಲವೊಂದು ಬೀಡಿ ಕಂಪೆನಿಗಳ ಮಾಲಕರು ಬೇರೆ ಪ್ರದೇಶಗಳಿಂದ ಕಡಿಮೆ ಕೂಲಿ ನೀಡಿ ಅಲ್ಲಿಂದ
ಬೀಡಿ ತಯಾರಿಸಿ ಜಿಲ್ಲೆಗೆ ತಂದು ಮಾರಾಟ ನಡೆಸುತ್ತಿರುವ ಕಾರಣ ಪ್ರಸ್ತುತ ಸಮಸ್ಯೆ ಎದುರಾಗಿದೆ ಎಂದು ಅವರು
ಆರೋಪಿಸಿದರು.
ಈಗಾಗಲೇ ಹಲವು ಬಾರಿ ಬೀಡಿ ಕಾಮರ್ಿಕರಿಗೆ ಕನಿಷ್ಥಕೂಲಿ ನಿಗದಿಗೊಳಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗಿದ್ದರೂ
ಪ್ರಯೋಜನವಾಗಿಲ್ಲ. ಆದ್ದರಿಂದ ಸಹಾಯಕ ಕಾಮರ್ಿಕ ಆಯುಕ್ತರು ಬೀಡಿ ಕಾಮರ್ಿಕರಿಗೆ ವಾರಪೂತರ್ಿ ಕೆಲಸ ನೀಡುವಂತೆ
ಕಂಪೆನಿಗಳಿಗೆ ಸೂಚಿಸಬೇಕು. ಕೆಲಸ ನೀಡದ ದಿನಗಳಿಗೆ ಪರಿಹಾರ ಕೊಡಿಸಬೇಕು ಹಾಗೂ ಬೀಡಿ ಉದ್ಯಮ ಮತ್ತು ಕಾಮರ್ಿಕರ
ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ವಿ.ಕುಕ್ಯಾನ್ ಮಾತನಾಡಿ, ಜಿಲ್ಲೆಯ ಆಥರ್ಿಕತೆಗೆ ಬೀಡಿ ಉದ್ಯಮದ ಪಾತ್ರ ಮಹತ್ತರವಾದುದು, ಇಂದು
ಬೆಲೆ ಏರಿಕೆಯ ಸಮಸ್ಯೆ ಇದ್ದರೂ ಬೀಡಿ ಕಾಮರ್ಿಕರಿಗೆ 2-3ದಿನ ಮಾತ್ರ ಕೆಲಸ ನೀಡುತ್ತಿರುವುದರಿಂದ ಕಾಮರ್ಿಕರು ಕಷ್ಟಪಡುವಂತಾಗಿದೆ.
ಕೇಂದ್ರದ ಕಾಮರ್ಿಕ ಸಚಿವ ಆಸ್ಕರ್ ಫೆನರ್ಾಂಡಿಸ್ ಜಿಲ್ಲೆಯವರಾದರೂ ಇಲ್ಲಿನ ಬೀಡಿ ಕಾಮರ್ಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜಿಲ್ಲಾ
ಉಸ್ತುವಾರು ಸಚಿವರೂ ಸಹ ಕಾಮರ್ಿಕರ ಮತ ಪಡೆದಿದ್ದು, ಸಮಸ್ಯೆ ಪರಿಹರಿಸುತ್ತ ಹಾಗೂ ವಿವಿಧ ಸವಲತ್ತುಗಳನ್ನು ಒದಗಿಸಲು ಮುಂದಾಗಿಲ್ಲ. ಅದ್ದರಿಂ ಜನಪ್ರತಿನಿಧಿಗಳು ಬೀಡಿ ಕಾಮರ್ಿಕರ ಸಮಸ್ಯೆಯನ್ನು ಅರಿತು ಪರಿಹರಿಸಲು ಗಮನ ಹರಿಸಬೇಕಿದೆ. ಎಂದು ಒತ್ತಾಯಿಸಿದರು.
ಇದಕ್ಕೂ ಮುನ್ನ ನಗರದ ಬಲ್ಮಠದಿಂದ ಬೆಂದೂರ್ವೆಲ್ನ ಸಹಾಯಕ ಕಾಮರ್ಿಕ ಆಯುಕ್ತರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ಎಐಟಿಯುಸಿ ಉಪಾಧ್ಯಕ್ಷರಾದ ಡಿ.ಹೆನ್ರಿ ಲೋಬೊ ಬಂಟ್ವಾಳ, ಉಮಾವತಿ ಕುನರ್ಾಡು, ಖಜಾಂಚಿ ಬಿ.ಶೇಖರ್, ಜತೆ ಕಾರ್ಯದಶರ್ಿಗಳಾದ ಪಿ.ರಾಮಣ್ಣ ರೈ
ಪುತ್ತೂರು, ಸುರೇಶ್ ಕೂಮಾರ್ ಬಿ.ಸಿ.ರೋಡ್, ಸುಲೋಚನಾ ಕವತ್ತಾರು, ರೂಪಾ ಸಿದ್ದಾರ್ಥನಗರ, ಕರುಣಾಕರ್, ಚಂದಪ್ಪ ಅಂಚನ್, ಸರಸ್ವತಿ, ಈಶ್ವರ್
ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *