
ದೇಶದ ಭವಿಷ್ಯ ಯುವ ಜನತೆಯ ಕೈಯಲ್ಲಿ :ಅಜಿತ್ ಕುಮಾರ್ ರೈ ಮಾಲಾಡಿ
ಸುದ್ದಿ9 ಮಂಗಳೂರು;
ಯುವ ಜನತೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಿರಂತರ ಪ್ರಯತ್ನ ಹಾಗೂ ಛಲದಿಂದ ಮುಂದುವರಿದರೆ ಸ್ವ ಅಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿ ಸಾಧ್ಯ. ವಿದ್ಯಾಥರ್ಿಗಳು ವೈಜ್ಞಾನಿಕ ಕಾಲದಲ್ಲಿ ವೈಜ್ಞಾನಿಕ ಮನಸ್ಥಿತಿಯನ್ನು ಹೊಂದಿರಬೇಕು. ಶೈಕ್ಷಣಿಕ ಫಲಿತಾಂಶದಲ್ಲಿ ಮುಂದಿರುವ ಜತೆಗೆ ಬದುಕಿನ ಪರೀಕ್ಷೆಗಳಲ್ಲಿಯೂ ಯಶಸ್ವಿ ಹೊಂದಬೇಕು ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಭಿಪ್ರಾಯ ಪಟ್ಟರು.
ನಗರದ ಶ್ರೀ ರಾಮಕೃಷ್ಣ ಪದವಿ ಕಾಲೇಜಿನಲ್ಲಿ ಸೋಮವಾರ ಆರಂಭಗೊಂಡ ಅಂತರ್ ಕಾಲೇಜು ಮಟ್ಟದ ಇಗ್ನೈಟ್-ಎನಿಗ್ಮಾ 2014 ಮ್ಯಾನೇಜ್ ಮೆಂಟ್ ಮತ್ತು ಐಟಿ ಫೆಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಕ್ಷೇತ್ರದ ತಿಳುವಳಿಕೆಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ಸಮಾಜವನ್ನು ಬಿಟ್ಟು ವ್ಯಕ್ತಿಗೆ ಅಸ್ಥಿತ್ವವಿಲ್ಲ ,ಅವನು ಸಮಾಜದ ಅಂಗ ಎಂದು ತಿಳಿಯಬೇಕು. ಇಂದಿನ ವಿದ್ಯಾಥರ್ಿಗಳು ಮುಂದಿನ ಸಾಂಸ್ಕೃತಿಕ ಹರಿಕಾರರಾಗಬೇಕು. ಬದ್ದತೆ ಇರುವ ಬದುಕು ನಮ್ಮದಾಗಬೇಕು ಎಂದರು.
ವೆಸ್ಟನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿದರ್ೆಶಕ ಸ್ಟೇಫನ್ ಮೆಂಡಿಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾಥರ್ಿ ಸಮೂಹ ಅಧುನಿಕ ಕಾಲಕ್ಕೆ ಹೊಂದಿಕೊಂಡು ಅಧುನಿಕ ಮನಸ್ಸಿನೊಂದಿಗೆ ಪರಂಪರೆಯನ್ನು ಉಳಿಸುವ ಬೆಳೆಸುವ ಜವಾಬ್ಧಾರಿ ಹೊರಬೇಕಾಗಿದೆ. ಸಂಘದ ಬದುಕಿನಲ್ಲಿ ಸಂಬಂಧಗಳು ಬಹಳ ಮುಖ್ಯ. ವ್ಯವಹಾರಿಕತೆಯನ್ನು ಮೀರಿದ ಬದುಕು ನಮ್ಮದಾಗಬಾರದು ಎಂದರು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ನವೀನ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಂ. ಸುಂದರ್ ಶೆಟ್ಟಿ, ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷೆ ಆಶಾ ಆಚಾರ್ಯ, ಸರ್ವ ಕಾಲೇಜು ಸ್ನಾತಕೋತರ ವಿದ್ಯಾಥರ್ಿ ನಾಯಕ ಸಹಜ್.ಜೆ.ರೈ, ಸುಚಿತ್ರ, ರಾಜ್ ಕಿಶೋರ್ ಭಂಡಾರಿ, ನಟೇಶ ಆಳ್ವ, ವಿಭಾಗದ ಮುಖ್ಯಸ್ಥರಾದ ಪ್ರತಿಮಾ ಶೆಟ್ಟಿ, ಡಾ. ಸುಕನ್ಯ ಎನ್, ಶ್ವೇತಾ ಹೆಚ್. ಪೆರೋಡಿ, ಪ್ರಥ್ವಿ ಉಪಸ್ಥಿತರಿದ್ದರು.
ದಿವ್ಯಾ ವಂದಿಸಿದರು, ಆಯುಶ್ ಕಾರ್ಯಕ್ರಮ ನಿರೂಪಿಸಿದರು
