ಬಂಟ್ವಾಳ : ಬಂಟ್ವಾಳ ಸೇವಾ ಭಾರತಿ ಟ್ರಸ್ಟ್ ತಾಲೂಕು ಗೋಕುಲೋತ್ಸವ ಸಮಿತಿ ಇದರ ವತಿಯಿಂದ ಡಿ. 25ರಂದು ಮಂಗಳವಾರ ಗೋಕುಲೋತ್ಸವ ಶೋಭಾಯಾತ್ರೆಗೆ ಬಿಸಿರೋಡು ಕೈಕಂಬ ದ್ವಾರದಲ್ಲಿ ಚಾಲನೆ ನೀಡಲಾಯಿತು.

IMG_6852_resize
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ, ಡಾ.ಪ್ರಭಾಕರ ಭಟ್,ಐತಪ್ಪ ಆಳ್ಚ,ಸುಭಾಶ್ಚಂದ್ರ ಜೈನ್, ಸುಭಾಶ್ಚಂದ್ರ ಕಳಂಜ, ಕಾತಪ್ಪ ಶೆಟ್ಟಿ ಕೊಡ್ಮಾಣ್, ವೆಂಕಟ್ರಮಣ ಹೊಳ್ಳ ಮತ್ತಿತರರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು.

IMG_6870_resize IMG_6914_resize IMG_6916_resize
ಶೋಭಾಯಾತ್ರೆಯು ಬಿಸಿರೋಡ್ ಕೈಕಂಬದಿಂದ `ಸ್ಪರ್ಶ ಕಲಾ ಮಂದಿರ’ದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಚೈತನ್ಯಾನಂದ ಮಾತನಾಡಿ
ನವಭಾರತದ ನಿರ್ಮಾಣ ಮಕ್ಕಳ ಕೈಯಲ್ಲಿದೆ. ಮಕ್ಕಳಿದ್ದಾಗಲೇ ಭವಿಷ್ಯದ ಜೀವನದ ಬಗ್ಗೆ ನೈತಿಕತೆ ಮತ್ತು ಸಂಸ್ಕಾರದ ಪಾಠ ಕಲಿತುಕೊಳ್ಳಬೇಕು. ಇಟ್ಟಿಗೆ ಹಸಿಯಾಗಿದ್ದಾಗಲೇ ಅದರ ಮೇಲೆ ಮುದ್ರೆ ಒತ್ತಲು ಹೇಗೆ ಸಾಧ್ಯವೋ, ಅಂತೆಯೇ ಚಿಕ್ಕ ಮಕ್ಕಳಿಗೆ ಜೀವನ ಪಾಠ ತಿಳಿ ಹೇಳಲು ಸಾಧ್ಯವಿದೆ ಎಂದು ಹೇಳಿದರು.

IMG_6940_resize IMG_7070_resize IMG_7104_resize IMG_7130_resize
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಥವಾ ಮದುವೆ, ಇನ್ನಿತರ ಆಮಂತ್ರಣ ಪತ್ರಿಕೆಗಳಲ್ಲಿ ದೇವರ ಭಾವಚಿತ್ರ ಅಥವಾ ಭಾರತ ಮಾತೆಯ ಚಿತ್ರ ಮುದ್ರಿಸಬೇಡಿ. ಯಾಕೆಂದರೆ, ರಸ್ತೆಗಳಲ್ಲಿ ಬಿಸಾಡಬಹುದಾದ ಇಂತಹ ಪತ್ರಿಕೆಗಳ ಮೇಲೆ ಸಾರ್ವಜನಿಕರು ಉಗುಳುವ, ನಡೆದುಕೊಂಡು ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ಇದನ್ನು ನಿಲ್ಲಿಸಿ ಎಂದವರು ಗೋಕುಲೋತ್ಸವ ಸಮಿತಿ ಹಾಗೂ ಸಂಘ-ಸಂಸ್ಥೆಗಳು, ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

IMG_7142_resize IMG_7158_resize IMG_7162_resize IMG_7164_resize IMG_7169_resize (1)
ಪ್ರಾಸ್ತಾವಿಕವಾಗಿ ಮಾತನಾಡಿದ ಆರೆಸ್ಸೆಸ್ ಪುತ್ತೂರು ಜಿಲ್ಲಾ ಸಹ-ಕಾರ್ಯವಾಹ ಸುಭಾಶ್ಚಂದ್ರ ಕಳಂಜ ವ್ಯಕ್ತಿಯಲ್ಲಿ ವ್ಯಕ್ತಿತ್ವ ನಿರ್ಮಾಣವಾಗಬೇಕು. ಈ ದೆಸೆಯಲ್ಲಿ ನಾವೀಗ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಪಾಶ್ಚಾತ್ಯ ಆಚರಣೆಗಳೇ ಹಾಸು ಹೊಕ್ಕಾಗಿರುವ ಇಂದು ನಮ್ಮ ಸಂಸ್ಕøತಿ ಮರೆತಿದ್ದೇವೆ. ಸಮಾಜದ ಭಾಗವಾಗಿ ಸಂಘಗಳು ಇಂತಹ ಕೆಲಸ ಮಾಡಬೇಕು. ಮನೆ ಸಂಸ್ಕಾರದ ಕೇಂದ್ರವಾಗಬೇಕಿದ್ದರೂ, ಆಧುನಿಕ ಕಾಲಘಟ್ಟದಲ್ಲಿ ಎಲ್ಲರೂ ತುರ್ತಾಗಿದ್ದಾರೆ. ಆದ್ದರಿಂದ ಇಂತಹ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಲು ಅಲ್ಲಲ್ಲಿ ಬಾಲಗೋಕುಲಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು.

IMG_7215_resize IMG_7236_resize IMG_7254_resize IMG_7277_resize IMG_7307_resize IMG_7335_resize IMG_7378_resizeIMG_7383_resizeಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಬಿ ಸಿ ರೋಡ್ ಪದ್ಮ ಸರ್ವಿಸ್‍ನ ಸುಜೀರುಗುತ್ತು ಐತಪ್ಪ ಆಳ್ವ ಸುಜೀರುಗುತ್ತು
ಹಿಂದೂ ಎಂಬ ವಿಷಯದ ಬಗ್ಗೆ ನಾನು ಬಾಲ್ಯದಲ್ಲಿ ಹೆಚ್ಚೇನೂ ತಿಳಿದಿಲ್ಲ. ಆದರೆ ಈಗ ಅದರ ಅಗತ್ಯದ ಬಗ್ಗೆ ತಿಳಿದುಕೊಂಡಿದ್ದೇನೆ. ಭಗವದ್ಗೀತೆ ಮತ್ತು ಇತರ ಧಾರ್ಮಿಕ ಹಿನ್ನೆಲೆಯುಳ್ಳ ಗ್ರಂಥಗಳ ಅಧ್ಯಯನ ಮನುಷ್ಯರ ಜೀವನ ಸಾರ್ಥಕಗೊಳಿಸುವಲ್ಲಿ ದಾರಿದೀಪವಾಗಿದೆ. ಇಂತಹ ಗ್ರಂಥಗಳಿಗೆ ಹಿಂದೂಗಳು ಹೆಚ್ಚೆಚ್ಚು ಮಹತ್ವ ನೀಡಬೇಕೆಂದು ಹೇಳಿದರು.IMG_7383_resizeಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಮಾತನಾಡಿದರು.

ಈ ಸಂದರ್ಭದಲ್ಲಿ ವೆಂಕಟರಮಣಹೊಳ್ಳ, ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ರಾಮಕೃಷ್ಣ ಪ್ರಭು ಕುಜಿಲಬೆಟ್ಟು ದಾಮೋದರ ನೆತ್ತೆರ್‍ಕೆರೆ ಸ್ವಾಗತಿಸಿದರು. ಲತಾ ಭಂಡಾರಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಭರತ್ ಕುಮಾರ್ ವಂದಿಸಿದರು. ಬಳಿಕ ಸ್ಪರ್ಶ ಕಲಾ ಮಂದಿರದಲ್ಲಿ ಪುಟಾಣಿಗಳಿಂದ ವಿವಿಧ ಪ್ರತಿಭಾ ಪ್ರದರ್ಶನ, ಆಟೋಟ ಸ್ಪರ್ಧೆಗಳು ಜರುಗಿತು.

By Suddi9

Leave a Reply

Your email address will not be published. Required fields are marked *