ಬಂಟ್ವಾಳ : ಘಟಕದ ವಾರದ ಕವಾಯತ್ತು ಹಾಗೂ ಹಿರಿಯ ಗೃಹರಕ್ಷಕರಾದ ಶ್ರೀ ಐತಪ್ಪನವರಿಗೆ ಸನ್ಮಾನ ಕಾರ್ಯಕ್ರಮ ನ್ಯಾಯಾಲಯದ ಆವರಣದ ಗೃಹರಕ್ಷಕ ಕಛೇರಿ ಲ್ಲಿ ಜರಗಿತು. ಅಧ್ಯಕ್ಷತೆ ವಹಿಸಿದ್ದ ಗೃಹರಕ್ಷಕ ದಳದ ಕಮಾಡೆಂಟ್ ಡಾ.ಮುರಳಿಮೋಹನ್ ಚುಂತೂರ್ ಮಾತನಾಡಿ ನಮ್ಮ ಗೃಹರಕ್ಷಕರನ್ನು ಇನ್ನಷ್ಟು ಸಂಘ ಸಂಸ್ಥೆಗಳು ಸೇವೆಯನ್ನು ಗುರುತಿಸಿ ಗೌರವಿಸುವಂತಾಗಬೇಕು .IMG-20181221-WA0193

ಸುಮಾರು 26ವರ್ಷಗಳ ಕಾಲ ಕರ್ತವ್ಯ ನಿರ್ವಹಿಸ ಐತಪ್ಪ ರವರನ್ನು ಅಭಿನಂದಿಸಲಾಯಿತು. ನಿವೃತ್ತ ಘಟಕಾಧಿಕಾರಿ ಕೃಷ್ಣ ನಾಯಕ್ ಮಾತನಾಡಿ ನಮ್ಮ ಗೃಹರಕ್ಷಕ ಇಲಾಖೆಯು ಶಿಸ್ತಿನ ಇಲಾಖೆಯಾಗಿದ್ದು ನಮ್ಮನ್ನು ಎಲ್ಲರೂ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು. ಘಟಕಾಧಿಕಾರಿ ಬಿ.ಆರ್. ಶ್ರೀನಿವಾಸ್ ಆಚಾರ್ಯ ಉಪಸ್ಥಿತರಿದ್ದರು. ಸಿಬ್ಬಂದಿ ಶಿವರಾಜ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *