ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣಪೂಜಾ ಸಮಿತಿ ಆಶ್ರಯದಲ್ಲಿ ನಡೆದ 51ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಪ್ರಯುಕ್ತ ಧಾರ್ಮಿಕ ಸಭೆಯನ್ನು ಆಯೋಜಿಸಲಾಯಿತು.
ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಹಿರಿಯ ಪ್ರಾಧ್ಯಾಪಕ, ಆರ್ಥಿಕ ತಜ್ಞ ಡಾ.ಜಿ.ವಿ. ಜೋಶಿ ಮುಖ್ಯ ಭಾಷಣಕಾರಾಗಿದ್ದರು. ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಮೇಶ್ ಅಧ್ಯಕ್ಷತೆವಹಿಸಿದರು.

ಈ ಸಂದರ್ಭದಲ್ಲಿ ವಿದ್ಯುತ್ ಅವಘಡದಿಂದ ಕೈಗಳೆರಡನ್ನೂ ಕಳಕೊಂಡರೂ ಧೃತಿಗೆಡದೆ ಶ್ಯಾಮಿಯಾನ ವ್ಯವಹಾರ ಪ್ರಾರಂಭಿಸಿ ಯಶಸ್ಸು ಕಂಡಿರುವ, ಕಲ್ಲಬೆಟ್ಟು ಸತ್ಯನಾರಾಯಣ ಪೂಜಾ ಸಮಿತಿಯೊಂದಿಗೆ ಸಹಕರಿಸುತ್ತಿರುವ ಜಿ.ಕೆ. ಡೆಕೊರೇಟರ್ಸ್‍ನ ಗಣೇಶ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಪೂಜಾ ಸಮಿತಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ಚಂದ್ರ ರಾವ್ ವರದಿ ವಾಚಿಸಿದರು. ಸಂಚಾಲಕ ಸುಂದರ ಶೆಟ್ಟಿ , ಕೋಶಾ„ಕಾರಿ ಪ್ರದೀಪ್ ರೈ ಉಪಸ್ಥಿತರಿದ್ದರು. ಶ್ರೇಯಾ ಶೆಟ್ಟಿ ನಿರೂಪಿಸಿದರು.
ಬಳಿಕ ಸುಂಕದಕಟ್ಟೆ ಮೇಳದವರಿಂದ ಯಕ್ಷಗಾನ ಬಯಲಾಟ ಜರಗಿತು.
