ಮೋದಿಗಾಗಿ ಬೆತ್ತಲಾದ ಮೇಘನಾ ಪಟೇಲ್
ಸುದ್ದಿ9 ಮುಂಬೈ: ಜನರು ಜನಪ್ರಿಯತೆ ಗಳಿಸಲು ಏನೇನು ಕಸರತ್ತು ಮಾಡುತ್ತಾರೆ ಎಂಬುದಕ್ಕೆ ಇಲ್ಲಿದೆ ತಾಜಾ ಉದಾಹರಣೆ. ಮುಂಬೈನಲ್ಲಿ ಸಣ್ಣಪುಟ್ಟ ಮಾಡೆಲಿಂಗ್ ಮಾಡಿ ಹಣ ಗಳಿಸುತ್ತಿದ್ದ ಮೇಘನಾ ಪಟೇಲ್ ಎಂಬ ಚೆಲುವೆ ಬಿಜೆಪಿ ಪ್ರಧಾನಿ ಅಭ್ಯಥರ್ಿ ನರೇಂದ್ರ ಮೋದಿಯ ಬಹುದೊಡ್ಡ ಅಭಿಮಾನಿಯಂತೆ. ಈ ಅಭಿಮಾನವನ್ನು ಆಕೆ ಬರೀ ಬಾಯಿ ಮಾತಿನಲ್ಲಿ ವ್ಯಕ್ತಪಡಿಸಿದರೆ ಚೆನ್ನಾಗಿತ್ತು. ಆದರೆ ಆಕೆ ಹಾಗೆ ಮಾಡದೆ ತನ್ನ ಬಟ್ಟೆಯನ್ನೆಲ್ಲಾ ಕಳಚಿ ಬಿಜೆಪಿಯ ಚಿಹ್ನೆಯಾಗಿರುವ ಕಮಲದ ಮೇಲೆ ಮಲಗಿ ತನ್ನ ಖಾಸಗಿ ಭಾಗಗಳನ್ನು ಕಮಲದಿಂದಲೇ ಮುಚ್ಚಿ ಫೋಟೊ ತೆಗೆಸಿಕೊಂಡಿದ್ದಾಳೆ. ಇದು ಒಂದು ಫೋಟೊವಾದರೆ ಇನ್ನೊಂದರಲ್ಲಿ ಮೋದಿ ಭಾವಚಿತ್ರವಿರುವ ‘ವೋಟ್ ಫಾರ್ ನರೇಂದ್ರ ಮೋದಿ’ ಎಂಬ ಒಕ್ಕಣೆಯುಳ್ಳ ಪೋಸ್ಟರ್ ಸಹಾಯದಿಂದ ತನ್ನ ಮೈಯನ್ನು ಮುಚ್ಚಿಕೊಂಡು ಫೋಟೊಗೆ ಪೋಸ್ ನೀಡಿದ್ದಾಳೆ.
ನರೇಂದ್ರ ಮೋದಿ ಒರ್ವ ಅತ್ಯಂತ ಧೈರ್ಯಶಾಲಿ ವ್ಯಕ್ತಿಯಾಗಿದ್ದಾರೆ. ಅವರು ಕೋಟಿಗಟ್ಟಲೆ ಜನರ ಮನದಲ್ಲಿ ಮನೆ ಮಾಡಿದ್ದಾರೆ. ಅಂತೆಯೇ ದೇಶದ ಮುಂದಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ನಿಮರ್ೂಲನೆ ಮಾಡುತ್ತಾರೆ ಎಂದು ಮೇಘನಾ ಹೇಳಿಕೊಂಡಿದ್ದಾಳೆ. ಆಕೆಯ ಈ ನಡವಳಿಕೆಯಿಂದ ಬಿಜೆಪಿಗೆ ಮುಜುಗರವುಂಟಾಗಿದೆ ಆದರೆ ಇದರಿಂದ ಲಾಭ ಪಡೆಯುವವರು ಯಾರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

meghana

meghana1

By suddi9

Leave a Reply

Your email address will not be published. Required fields are marked *