ಮೂಡುಬಿದಿರೆ : ಇಲಲಿನ ಲಾಡಿಯ ಆದಿ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಪಿ. ಸುಧಾಕರ ಭಟ್ ನೇತೃತ್ವದಲ್ಲಿ, ಪೂಜಾ ಸಮಿತಿ, ಗ್ರಾಮಸ್ಥರು ಹಾಗೂ ಹತ್ತುಸಮಸ್ತರ ಸಹಕಾರದೊಂದಿಗೆ ಚತುರ್ಮುಖ ಶ್ರೀಬ್ರಹ್ಮದೇವರ ಸನ್ನಿಧಿಯಲ್ಲಿ ಮಂಗಳವಾರ ಗಣಯಾಗ, ಕಲಶಾಭಿಷೇಕ, ದೈವಗಳಿಗೆ ಪರ್ವ, ಬುಧವಾರ ನಾಗಬನದಲ್ಲಿ ತಂಬಿಲ ಸೇವೆ, ಪ್ರಸನ್ನ ಪೂಜೆ, ಗುರುವಾರ ಪಂಚವಿಂಶತಿ ಕಲಶ ಪ್ರಧಾನ, ಸಾರ್ವಜನಿಕ ಆಶ್ಲೇಷಾ ಬಲಿ, ಅನ್ನ ಸಂತರ್ಪಣೆ ಜರಗಿತು.

