ಮೂಡುಬಿದಿರೆ: ಕಲ್ಲಮುಂಡ್ಕೂರು-ನಿಡ್ಡೋಡಿ ಮಂಜನಬೈಲು ದೇವರ ಮನೆಯಲ್ಲಿ ಶ್ರೀ ಭವಾನಿಶಂಕರ ಭಜನಾ ಮಂಡಳಿಯ ವತಿಯಿಂದ 47ನೇ ವರ್ಷದ ಭಜನಾ ಮಂಗಲೋತ್ಸವದಲ್ಲಿ ಮೂಡುಬಿದಿರೆಯ ಚದುರಂಗ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಶಾಲೆಯ ಗುರು ವಿದ್ವಾನ್ ಎನ್. ಎಸ್. ಭಂಡಾರಿ ಅವರು ಆಳ್ವಾಸ್ ಶಿಕ್ಷಣಾಲಯದ ಸಂಗೀತ ಶಿಕ್ಷಕ ದಯಾನಂದ ಧಾರವಾಡ (ತಬ್ಲಾ), ಶರಣ ಬಸಪ್ಪ (ಹಾರ್ಮೋನಿಯಂ) ಇವರ ಸಾಥಿಯೊಂದಿಗೆ ಶಾಸ್ತ್ರೀಯ, ಅರೆಶಾಸ್ತ್ರೀಯ ಭಜನಾ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಸಹ ಕಲಾವಿದರೊಂದಿಗೆ ವಿದ್ವಾನ್ ಎನ್.ಎಸ್. ಭಂಡಾರಿ ಅವರನ್ನು ಭಜನಾ ಮಂಡಳಿಯ ಅಧ್ಯಕ್ಷ ವಿ. ಶಂಕರ ರಾವ್ ಹಾಗೂ ಚದುರಂಗ ಸಂಗೀತ ಶಾಲಾ ಸಂಚಾಲಕ ಧನಂಜಯ ಮೂಡುಬಿದಿರೆ ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಭಜನಾ ಮಂಡಳಿ ಕಾರ್ಯದರ್ಶಿ ಎಂ. ಬಾಲಕೃಷ್ಣ ರಾವ್, ಪ್ರಶಾಂತ ರಾವ್, ಸಂತೋಷ್ ರಾವ್ ಉಪಸ್ಥಿತರಿದ್ದರು. ಹರಿದಾಸ ಚಂದ್ರಕಾಂತ ರಾವ್ ಮಂಜನಬÉೈಲು ನಿರೂಪಿಸಿದರು.
