ಬಂಟ್ವಾಳ:ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವವು ಇದೇ 13ರಂದು ನಡೆಯಲಿದೆ.
ಅಂದು ಬೆಳಿಗ್ಗೆ 5ಗಂಟೆಗೆ ಉಷಾ ಪೂಜೆ, 7ಗಂಟೆಗೆ ಪಂಚಾಮೃತ ಮತ್ತು ಪವಮಾನ ಅಭಿಷೇಕ, 9ಗಂಟೆಗೆ ಸಾಮೂಹಿಕ ಆಶ್ಲೇಷಾ ಬಲಿ, ಮಧ್ಯಾಹ್ನ ಷಷ್ಠಿ ಮಹೋತ್ಸವ, ದೇವರ ಬಲಿ ಉತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಯಿಂದ ಭಜನೆ, ದುರ್ಗಾ ನಮಸ್ಕಾರ ಪೂಜೆ ಹಾಗೂ ಪರಿವಾರ ದೈವಗಳಾದ ಮೈಸಂದಾಯ, ರಕ್ತೇಶ್ವರಿ, ಕಲ್ಲುರ್ಟಿ. ಅಣ್ಣಪ್ಪ ಪಂಜುರ್ಲಿ ನೇಮೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಕುಮಾರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
