ಮೂಡುಬಿದಿರೆ:ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿ ಪತಿ ತನ್ನ ಪತ್ನಿಯನ್ನೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ ಘಟನೆ ಇಲ್ಲಿನ ಪಡುಮಾರ್ನಾಡು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಸೌಮ್ಯ ಶೆಟ್ಟಿ(29)ಎಂದು ಗುರುತಿಸಲಾಗಿದೆ. ಈಕೆಯ ಬಲಕೈಗೆ ಕತ್ತಿಯ ಗಂಭೀರ ಏಟು ಬಿದ್ದಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಕೆಯ ಪತಿ, ಆರೋಪಿ ರವಿರಾಜ್ ಶೆಟ್ಟಿ ವಿರುದ್ಧ ಮೂಡುಬಿದಿರೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿದ್ದಾರೆ.
ಹಲ್ಲೆಗೊಳಗಾದ ಸೌಮ್ಯ ಶೆಟ್ಟಿಗೆ ಕುಪ್ಪೆಪದವಿನ ರವಿರಾಜ್ ಶೆಟ್ಟಿ ಜತೆ ವಿವಾಹವಾಗಿತ್ತು. ಸೌಮ್ಯ ಸಾಣೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ ರವಿರಾಜ್ ಶೆಟ್ಟಿ ಹೋಟೇಲ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಮದುವೆಯಾದ ಕೆಲವೇ ತಿಂಗಳಲ್ಲಿ ವೈಮನಸ್ಸು ಉಂಟಾಗಿ ಸೌಮ್ಯ ತನ್ನ ಪತಿಯಿಂದ ದೂರವಾಗಲು ಪ್ರಯತ್ನಿಸುತ್ತಿದ್ದರೆನ್ನಲಾಗಿದೆ. ಪತಿ ಮನೆ ತೊರೆದು ತನ್ನ ತವರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಪತ್ನಿ ವರ್ತನೆಯಿಂದ ಬೇಸತ್ತ ಪತಿ ಶುಕ್ರವಾರ ಸೌಮ್ಯ ಪಡುಮಾರ್ನಾಡಿನಲ್ಲಿ ಶಾಲೆಗೆ ಹೋಗಲು ಬಸ್‍ಕಾಯುತ್ತಿದ್ದಾಗ ಅಲ್ಲಿಗೆ ಬಂದು ಆಕೆಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಘಟನೆ ಕಂಡು ಅಕ್ಕಪಕ್ಕದವರು ಧಾವಿಸಿ ಬಂದಾಗ ಆರೋಪಿ ಅಲ್ಲಿಂದ ಪರಾರಿಯಾಗಿ ಪತ್ನಿ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದರು. ಸುದ್ದಿ ತಿಳಿದು ಸ್ಥಳೀಯರು ಇವರನ್ನು ಬಾವಿಯಿಂದ ರಕ್ಷಿಸಿದ್ದಾರೆ.

By Suddi9

Leave a Reply

Your email address will not be published. Required fields are marked *