ಬಂಟ್ವಾಳ: ಬರಿಮಾರು ದ.ಕ.ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ಪೋಷಕರ ಕ್ರೀಡಾ ಕೂಟ ಹಾಗೂ ಮಕ್ಕಳ ಮೆಟ್ರಿಕ್ ಮೇಳ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಾರ್ಯಕ್ರಮ ವನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ವಸಂತ ಪಟ್ಲಕೋಡಿ ಉದ್ಘಾಟಿಸಿದರು, ಪಂ.ಸದಸ್ಯ ರಾದ ಗಣೇಶ್ , ಕಲಾವತಿ , ಶಾಲಾಭಿವ್ರದ್ದಿ ಸಮಿತಿ ಅಧ್ಯಕ್ಷ ಧನಂಜಯ ಹಾಗೂ ಶಾಲಾಭಿವ್ರದ್ದಿಸಮಿತಿ ಸದಸ್ಯ ರು , ಶಾಲಾ ಮುಖ್ಯೋಪಾಧ್ಯಾಯಿನಿ ಕಲ್ಯಾಣಿ, ಶಿಕ್ಷಕ ವ್ರಂದ ಹಾಗೂ ಪೋಷಕರು ಉಪಸ್ಥಿತರಿದ್ದರು.
