ಉಡುಪಿ: ಉಡುಪಿ ಮತ್ತು ಕುಂದಾಪುರ ತಾಲೂಕಿನಲ್ಲಿ ವಾಹನಗಳು ನಿಯಮಮೀರಿ ಕರ್ಕಶ ಹಾರ್ನ್ ಹಾಗೂ ಟಿಂಟ್ ಗ್ಲಾಸ್‍ಗಳನ್ನು ಬಳಸುವ ಬಗ್ಗೆ ದೂರುಗಳು ದಾಖಲಾಗಿದೆ. ಈ ಕುರಿತು ಒಂದು ವಾರ ವಿಶೇಷ ಕಾರ್ಯಚರಣೆ ನಡೆಸಲಾಗುವುದು ಎಂದು ಪೋಲಿಸ್ ವರಿಷ್ಟಾಧಿಕಾರಿ ಲಕ್ಷಣ ನಿಂಬರಗಿ ತಿಳಿಸಿದರು.

laxman nimbaragi sp
ಈ ಬಗ್ಗೆ ಶುಕ್ರವಾರ ಕಚೇರಿ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ಕಶ ಹಾರ್ನ್ ಹಾಗೂ ಟಿಂಟ್ ಗಾಜುಗಳ ಬಳಸದಂತೆ ಎಚ್ಚರಿಕೆ ನೀಡಿದ್ದರೂ ಪಾಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಅದರಂತೆ ವಿಶೇಷ ಕಾರ್ಯಚರಣೆ ನಡೆಸಿ ವಾಹನ ಮಾಲೀಕರಿಗೆ ದಂಡ ವಿಧಿಸುವ ಬದಲು ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕೋರ್ಟ್‍ಗೆ ಹಾಜರು ಪಡಿಸಲಾಗುವುದು ಎಂದು ತಿಳಿಸಿದರು.

By suddi9

Leave a Reply

Your email address will not be published. Required fields are marked *