ಮುಂಬಯಿ: ಕುಂದಾಪುರ ತಾಲೂಕಿನ ಹಂಗ್ಲೂರು ನಿವಾಸಿ ಅಶೋಕ ಎಂಬವರ ಪತ್ನಿ ಸುಮನ ನ.19ರಂದು ತುರ್ತಾಗಿ ಸಿಸರಿನ್ ಶಸ್ತ್ರಚಿಕಿತ್ಸೆ ಗೊಳಗಾಗಿದ್ದಾರೆ. ಇವರು ಒಳರೋಗಿ ಸಂಖ್ಯೆ 3256114ರ ಪ್ರಕಾರ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ದಾಖಲಾಗಿದ್ದಾರೆ. ನಂತರ ಮೂತ್ರಕೋಶದ ತೀವ್ರ ತೊಂದರೆಯಿಂದ ತುರ್ತು ನಿಗಾ ವಿಭಾಗಕ್ಕೆ ದಾಖಲಾಗಿ ನ.20ರಂದು ಲೆಪರೋಟಮ್ ಚಿಕಿತ್ಸೆಗೆ ಮಾಡಲಾಗಿದೆ. ಮೂತ್ರಕೋಶದ ತೀವ್ರ ಅಘಾತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನಕ್ಕೆ ಕೆಲವು ಬಾರಿ ಡಯಾಲಿಸಿಸ್ಗೆ ಒಳಗಾಗಬೇಕಾಗಿದೆ.
ಇವರು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯಲು ಸುಮಾರು ಆರು ಲಕ್ಷಕ್ಕಿಂತಲೂ ಹೆಚ್ಚಿನ ಖರ್ಚು ತಗಲುತ್ತದೆ ಎಂಬುದಾಗಿ ತಜ್ಞ ವೈದ್ಯರು ತಿಳಿಸಿದ್ದಾರೆ. ದರ್ಜಿಯಾಗಿರುವ ಪತಿ ಅಶೋಕ ಆದಾಯ ತೀರಾ ಕಡಿಮೆಯಿದ್ದು ಇವರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಜೀವನ ಸಾಗಿಸುವುದು ಕಷ್ಟವಾಗಿದೆ. ಪತ್ನಿಯ ಅಸೌಖ್ಯತೆಯಿಂದ ದಾನಿಗಳಿಂದ ಆರ್ಥಿಕ ಸಹಾಯ ಯಾಚಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಆರ್ಥಿಕ ಸಹಾಯ ನೀಡಿ ಸಹಕರಿಸುವಂತೆ ವಿನಂತಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಡೆಯರ ಹೋಬಳಿ ಇಲ್ಲಿನ ಕೆನರಾ ಬ್ಯಾಂಕ್ ಖಾತೆ ಸಂಖ್ಯೆ 4339108000292 IFSC Code CNRB0004339, MICR Code 576015203 ಆಗಿದೆ. ಕೊಡುಗೈದಾನಿಗಳು ಈ ಖಾತೆಗೆ ತಮ್ಮ ಸಹಾಯಧನವನ್ನು ನೀಡಿ ಸಹಕರಿಸುವಂತೆ ಅಶೋಕ್ ಮನವಿ ಮಾಡಿಕೊಂಡಿರುತ್ತಾರೆ. ದೂರವಾಣಿ ಸಂಖ್ಯೆ 9591471213 (ಅಶೋಕ್).

