ಕೈಕಂಬ: ನೃತ್ಯಂ ಕಾಸರಗೋಡು ಕೈಕಂಬ ಶಾಖೆಯ ವಾರ್ಷಿಕೋತ್ಸವ “ಚಿಗುರುಸಂಜೆ”2018 ನೃತ್ಯ ವೈವಿಧ್ಯ ಡಿ.1ರಂದು ಶನಿವಾರ ಗಣೇಶ್ ಕಟ್ಟೆ ಕೈಕಂಬದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಶ್ರೀರಾಮ್ ಹೋಟೆಲ್ ಮಾಲಕ ಎಂ ಹರಿರಾವ್ ವಹಿಸಲಿದ್ದಾರೆ. ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಆಶಿರ್ವಚನನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶ್ರೀನಿವಾಸ್ ಎಂಟರ ಪ್ರೈಸಸ್ ಇದರ ಮಾಲಕ ರಮೇಶ್ ರಾವ್, ನೋಟರಿ ವಕೀಲ ವಿಜಯ ಗೌಡ ಶಿಬ್ರಿಕೆರೆ, ಅಶಿತ್ ಎಂಟರ್ ಪ್ರೈಸಸ್ ಮಾಲಕ ಕೈಕಂಬ ರಾಜೀವ ಕೆ, ನೃತ್ಯ ನಿರ್ದೇಶಕರಾದ ಲತಾ ಶಶಿಧರನ್ ಮತ್ತಿತರರು ಭಾಗವಹಿಸಲಿದ್ದಾರೆ.
