ಮೂಡುಬಿದಿರೆ: ಇಂಟಿಗ್ರೇಲ್ ಯೋಗ ಸಂತ್ಸoಗ (ರಿ) ಇದರ ಸಹಸಂಸ್ಥೆ ದಿವ್ಯಾಸ್ ನ ಆಶ್ರಯದಲ್ಲಿ “ಸೇವಾ ಯೋಜನೆ” ಯ ಪ್ರಯುಕ್ತ ಸರಕಾರಿ ಪ್ರೌಢಶಾಲೆ ಮೂಡುಮಾರ್ನಡು ಇಲ್ಲಿ ಕ್ಲೀನ್ ಅಪ್ ಮೂಡುಮಾರ್ನಾಡ್ ಸ್ವಚ್ಛತಾ ಕಾರ್ಯಕ್ರಮವು ಶ್ರೀ ಮಹಾವೀರ ಕಾಲೇಜಿನ ಶ್ರೀರಾಜ್ ಎಸ್ ಸನಿಲ್ ರವರ ನೇತೃತ್ವದಲ್ಲಿ ಹಳೇ ವಿದ್ಯಾರ್ಥಿ ಸಂಘ ಮೂಡುಮಾರ್ನಡು ಹಾಗೂ ಸ್ಥಳೀಯರ ಸಹಕಾರದೊಂದಿಗೆ ದಿನಾಂಕ ನ.25 ಭಾನುವಾರ ದಂದು ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ Sಆಒಅ ಯ ಅದ್ಯಕ್ಷರಾದ ಭಾಸ್ಕರ್ ಎಸ್ ಕೋಟ್ಯಾನ್ ಇವರು ನೆರವೇರಿಸಿದರು
ಈ ಸಂದರ್ಭದಲ್ಲಿ ಮೂಡುಮಾರ್ನಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಾಥ್ ಎನ್ ಸುವರ್ಣ ,ಶಾಲಾ ಮುಖ್ಯ ಶಿಕ್ಷಕಿ ರಾಜಶ್ರೀ ,ಹಳೇ ವಿದ್ಯಾರ್ಥಿ ಸಂಘದ ಅದ್ಯಕ್ಷರಾದ ಯಶೋಧರ್ ಆಚಾರ್ಯ ಹಾಗೂ ಮತ್ತಿತರು ಉಪಸ್ತಿತರಿದ್ದರು.ಹಳೇ ವಿದ್ಯಾರ್ಥಿ ಸಂಘ ದ ವತಿಯಿಂದ ಉಪಹಾರ ದ ವ್ಯವಸ್ಥೆ ಮಾಡಲಾಗಿತ್ತು.
