ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಮಂಗಳೂರು ವಿಶ್ವವಿದ್ಯಾಲಯ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ವಿ.ವಿ 39ನೇ ಅಥ್ಲೆಟಿಕ್ಸ್‍ನ ಮೂರನೇ ದಿನ ಕೂಡ ಅತಿಥೇಯ ಮಂಗಳೂರು ವಿಶ್ವವಿದ್ಯಾಲಯ ಮುನ್ನಡೆ ಸಾಧಿಸಿದೆ. ಅತಿಥೇಯ ವಿ.ವಿ, ಆಳ್ವಾಸ್‍ನ ಕ್ರೀಡಾಪಟು ಪೂನಂ ಜವಲಿನ್ ಥ್ರೋನಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.

VV Sports RESULT (1)
ಜವಲಿನ್ ಥ್ರೋನಲ್ಲಿ ಆಳ್ವಾಸ್‍ನ ಪೂನಂ ರಾಣಿ 53.67 ಮೀಟರ್ ಎಸೆದು ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ 2013ರಲ್ಲಿ ಸಿಸಿಎಸ್‍ಯು ಮೀರತ್‍ನ ಅನ್ನು ರಾಣಿ 52.64 ಮೀಟರ್ ನಿರ್ಮಿಸಿದ್ದಾರೆ ದಾಖಲೆಯನ್ನು ಹಿಂದಿಕ್ಕಿದ್ದಾರೆ.

VV Sports RESULT (3)
ಮುಂಬೈ ವಿ.ವಿ ಕ್ರೀಡಾಪಟು ಜೈಷಾ ಕೂಟ ತ್ರಿಪಲ್ ಜಂಪ್‍ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಜೆಷಾ ತ್ರಿಪಲ್‍ಜಂಪ್‍ನಲ್ಲಿ 16.36 ಮೀಟರ್ ಜಿಗಿದು, 2017ರಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಕ್ರೀಡಾಪಟು ಶ್ರೀಜಿತ್ ಮೋಹನ್ ಅವರ 16.05 ದಾಖಲೆಯನ್ನು ಹಿಂದಿಕ್ಕಿದ್ದಾರೆ. ಭಾನುವಾರ ಮೂರು ಕೂಟ ದಾಖಲೆಗಳಾಗಿದ್ದು, ಮೂರನೇ ದಿನ ಒಂದು ಕೂಟ ದಾಖಲೆಯಾಗುವುದರೊಂದಿಗೆ ಎರಡು ದಿನಗಳಲ್ಲಿ ಒಟ್ಟು ಐದು ಕೂಟ ದಾಖಲೆಗಳಾಗಿವೆ.

VV Sports RESULT (2)

ಮೊದಲ ದಿನ ಆಳ್ವಾಸ್‍ನ ಇಲಕ್ಯಾದಾಸನ್ 100ಮೀ. ಓಟದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿ `ವೇಗದ ಓಟಗಾರ’ ಗೌರವಕ್ಕೆ ಪಾತ್ರರಾಗಿದ್ದರು. ಮಂಗಳವಾರ ಆಳ್ವಾಸ್‍ನ ಮತ್ತೊಬ್ಬ ಕ್ರೀಡಾಪಟು ದಾಖಲೆ ನಿರ್ಮಿಸುವರೊಂದಿಗೆ ಐದು ಕೂಟ ದಾಖಲೆಗಳಲ್ಲಿ ಆಳ್ವಾಸ್ ಕ್ರೀಡಾಪಟುಗಳು 2 ಹೊಸ ಕೂಟ ದಾಖಲೆಗಳನ್ನು ನಿರ್ಮಿಸಿದ್ದಾರೆ. 400 ಮೀಟರ್ ಓಟದಲ್ಲಿ ಆಳ್ವಾಸ್‍ನ ರೋಹನ್. ಡಿ. ಕುಮಾರ್ ದ್ವಿತೀಯ ಸ್ಥಾನ ಪಡೆದರು. ಆಳ್ವಾಸ್‍ನ ವನಮ್ ಶರ್ಮ 51.76 ಮೀಟರ್ ಚಕ್ರ ಎಸೆಯುವ ಮುಖೇನ ರಜತ ಪದಕ ತಮ್ಮದಾಗಿಸಿಕೊಂಡರು.ಪ್ರವೀಣ್ ಟ್ರಿಪಲ್ ಜಂಪ್‍ನಲ್ಲಿ 16.05 ಮೀಟರ್ ಜಿಗಿಯುವ ಮೂಲಕ ದ್ವಿತೀಯ ಸ್ಥಾನ ಪಡೆದರು.

By suddi9

Leave a Reply

Your email address will not be published. Required fields are marked *