ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ಗ್ರಾಮ ಪಂಚಾಯತ್ ಗಳ ಸಹಯೋಗದೊಂದಿಗೆ ವಿಶ್ವ ಶೌಚಾಲಯ ದಿನಾಚರಣೆ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ರಾಜೇಶ್ ನಾಯಕ್ ಅವರು ಸ್ವಚ್ಚತೆ ನಮ್ಮ ಪ್ರತಿಯೊಬ್ಬರ ಆದ್ಯಕರ್ತವ್ಯ ಸಾರ್ವಜನಿಕ ರನ್ನು ಸಂಘಸಂಸ್ಥೆಗಳನ್ನು ಸೇರಿಕೊಳ್ಳಿಸಿ ಸ್ವಚ್ಚತೆಯ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದರು. ‌ನಗರ ಪ್ರದೇಶಗಳಲ್ಲಿ ಶೌಚಾಲಯ ದ ಅಗತ್ಯ ಹೆಚ್ಚು ಇದೆ,ತಾಲೂಕಿನಲ್ಲಿ ಸ್ವಚ್ಚತೆಯ ಬಗ್ಗೆ ಅಧಿಕಾರಿಗಳು ಹಿಂದೆಟುಹಾಕಿದರೆ ಅಂತವರ ವಿರುದ್ದ ಮೇಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.2 (1)

ತಾಲೂಕಿನ ಪ್ರಮುಖ ನಗರದಲ್ಲಿ ಯೇ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರ ಬಗ್ಗೆ ಪ್ರಸ್ತಾಪಿಸಿ ದ ಅವರು ಪುರಸಭೆಯ ಅಧಿಕಾರಿಗಳು ಈ ಕಾರ್ಯಕ್ರಮ ದಲ್ಲಿ ಗೈರುಹಾಗಿದ್ದಾರೆ ಅವರು ಜವಾಬ್ದಾರಿ ಯಿಂದು ನುಣುಚಿಕೊಳ್ಳುವ ಪ್ರಯತ್ನ ಪ್ರತಿ ಬಾರಿ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಅಧಿಕಾರಿಗಳ ಜವಬ್ದಾರಿ ಯ ಬಗ್ಗೆ ತಿಳಿಸಿದರು. ‌ತಾಲೂಕಿನಲ್ಲಿ ಯಾವ ಕಡೆಗಳಲ್ಲಿ ಶೌಚಾಲಯ ಬೇಕಾಗಿದೆ ಎಂದು ಪರಿಶೀಲನೆ ನಡೆಸಿ ಕೂಡಲೇ ಶೌಚಾಲಯ ನಿರ್ಮಾಣ ಕಾರ್ಯ ಶೀಘ್ರವಾಗಿ ಮಾಡಿ ಎಂದು ಇ.ಒ.ಅವರಿಗೆ ತಿಳಿಸಿದರು.ಕಾರ್ಯಕ್ರಮ ದ ಅದ್ಯಕ್ಷ ತೆ ವಹಿಸಿ ಮಾತನಾಡಿದ ಚಂದ್ರಹಾಸ ಕರ್ಕೇರಜನಪ್ರತಿನಿಧಿಗಳು ಜವಬ್ದಾರಿ ಯನ್ನು ಅರಿತುಕೊಂಡು ವಿಶೇಷ ಕಾಳಜಿಯಿಂದ ಸರಕಾರದ ಕಾರ್ಯಕ್ರಮ ವನ್ನು ಯಶಸ್ಸು ಮಾಡಲು ಪಣತೊಡಬೇಕು ಎಂದು ಹೇಳಿದರು. ಸಾರ್ವಜನಿಕ ರಿಗೆ ತೊಂದರೆ ಯಾಗದ ರೀತಿಯಲ್ಲಿ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಪ್ರಮಾಣದ ಒತ್ತುಕೊಡಬೇಕು. ಕಟ್ಟಡ ದ ಪರವಾನಿಗೆ ನೀಡುವ ಸಂದರ್ಭದಲ್ಲಿ ಯೂ ಸ್ವಚ್ಚತೆಗೆ ಆದ್ಯತೆ ನೀಡಿ ಕರ್ತವ್ಯ ದ ಜೊತೆ ಜವಬ್ದಾರಿ ಯನ್ನು ನೋಡಿಕೊಳ್ಳಿ ಎಂದು ಅವರು ಹೇಳಿದರು.1 (4)

ಮುಖ್ಯ ಅತಿಥಿಯಾಗಿ ಜಿ.ಪಂ.ಸದಸ್ಯ ರಾದ ರವೀಂದ್ರ ಕಂಬಳಿ, ಎಂ.ಎಸ್.ಮಹಮ್ಮದ್ , ಮಂಜುಳಾ ಮಾದವ ಮಾವೆ,ಮಮತಾ ಗಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಕಮಲಾಕ್ಷೀ ಕೆ.ಪೂಜಾರಿ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್,
ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಹಶೀಲ್ದಾರ ಪುರಂದರ ಹೆಗ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ಗ್ರಾಮ ಪಂಚಾಯತ್ ಅದ್ಯಕ್ಷರುಗಳು ಹಾಗೂ ಸದಸ್ಯರುಗಳು , ತಾಲೂಕಿನ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.ತಾ.ಪಂ.ಸಿಬ್ಬಂದಿ ಗಳಾದ ಶಾಂಭವಿ ರಾವ್, ಪ್ರಶಾಂತ್, ಕುಶಾಲಪ್ಪ, ಚಂದ್ರಾವತಿ, ಆಶೋಕ್ , ಲಕ್ಷಣ್, ಸುಂದರ್ ಹಾಜರಿದ್ದರು. ಬಂಟ್ವಾಳ ತಾಲೂಕು ಪಂಚಾಯತ್ ಇ.ಒ.ರಾಜಣ್ಣ ಪ್ರಸ್ತಾವಿಕವಾಗಿ ಮಾತನಾಡಿ ಬಳಿಕ ಸ್ವಾಗತಿಸಿದರು.
ಮಂಜುವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಪಿ.ಡಿ.ಒ.ವಿಜಯಶಂಕರ ಆಳ್ವ ವಂದಿಸಿದರು. ‌

By suddi9

Leave a Reply

Your email address will not be published. Required fields are marked *