ಕೈಕಂಬ : ಕಾಂಗ್ರೆಸ್ ಪಕ್ಷದಿಂದ ಬಡವರ ಮತ್ತು ದೀನದಲಿತರ ಅಭಿವೃದ್ಧಿಗಾಗಿ ಕೆಲಸವಾಗಬೇಕೆಂದು ಸಾರಿದ್ದ ಧೀಮಂತ ನಾಯಕಿ ಇಂದಿರಾ ಗಾಂಧಿಯವರ ಹುಟ್ಟುಹಬ್ಬ ಇಲ್ಲಿ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ದಕ ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ ಹೇಳಿದರು.ಅವರು ಸೋಮವಾರ ಗುರುಪುರ ಕೈಕಂಬದ ಎಚ್‍ಐವಿ ಮತ್ತು ಅನಾಥ ಮಕ್ಕಳ ಆಶ್ರಮ `ಸ್ನೇಹ ಸದನದಲ್ಲಿ’ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹುಟ್ಟುಹಬ್ಬದ ನಿಮಿತ್ತಗುರುಪುರ ಬ್ಲಾಕ್ ಮಹಿಳಾ ಕಾಂಗ್ರೆಸ್‍ಮಕ್ಕಳಿಗೆ ಹಣ್ಣುಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳಾ ಅಧ್ಯಕ್ಷೆ ಸೆಲಿನ್ ಫೆರ್ನಾಂಡಿಸ್ ಹಾಗೂ ಅವರ ಬಳಗವನ್ನು ಅಭಿನಂದಿಸಿದರು.ಸ್ನೇಹಸದನದ ಮುಖ್ಯಸ್ಥ ಫಾದರ್ ತೇಜಿ ಹಾಗೂ ಕೌನ್ಸಿಲರ್ ಜಾಕ್ಲೀನ್ ಇಂದಿರಾ ಗಾಂಧಿ ಹುಟ್ಟುಹಬ್ಬದ ನೆನಪಿಗಾಗಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಹಣ್ಣು ವಿತರಣೆ ಅವಿಸ್ಮರಣೀಯ ಎಂದು ಹೇಳಿದರು.ಸ್ನೇಹ ಸದನ ಕೈಕಂಬದಲ್ಲಿರುವ ಎಚ್‍ಐಪಿ ಪೀಡಿತರು ಮತ್ತು ಅನಾಥ ಮಕ್ಕಳ ಸಮಾಜಸೇವಾ ಆಶ್ರಯ ಕೇಂದ್ರ. ಪ್ರಸ್ತುತ ಕೇಂದ್ರದಲ್ಲಿ 38 ಮಕ್ಕಳಿದ್ದಾರೆ. ಫಾದರ್ ತೇಜಿ ಮುಖ್ಯಸ್ಥರಾಗಿದ್ದು, ಫಾ. ಶೀಜು ಸಹಾಯಕ ಅಧಿಕಾರಿಯಾಗಿದ್ದಾರೆ. ಸಲಹೆಗಾರರಾಗಿ ಕೌನ್ಸಿಲರಾಗಿ ಜಾಕ್ಲೀನ್, ದಾದಿಯಾಗಿ ಪ್ರೇಮಾ ಪಿಂಟೋ ಸಹಿತ ಒಟ್ಟು ಎಂಟು ಮಂದಿ ಸಿಬ್ಬಂದಿ ಇದ್ದಾರೆ. ಸೈಂಟ್ ಕುಮಿಲಸ್ ಕೇರ್ ಹೋಂ ಸಂಚಾಲಕತ್ವ ಸಂಸ್ಥೆ ಇದಾಗಿದೆ.
ಸಮಾರಂಭದಲ್ಲಿ ಗುರುಪುರ ಗ್ರಾಪಂ ಅಧ್ಯಕ್ಷೆ ರುಕಿಯಾ, ಕಂದಾವರ ಗ್ರಾಪಂ ಅಧ್ಯಕ್ಷೆ ವಿಜಯಾ ಜಿ ಸುವರ್ಣ, ಗಂಜಿಮಠ ಗ್ರಾಪಂ ಉಪಾಧ್ಯಕ್ಷ ಜಾಕಿರ್, ತಾಪಂ ಸದಸ್ಯ ಸಚಿನ್ ಅಡಪ, ಕಾಂಗ್ರೆಸ್ ಸದಸ್ಯರಾದ ಅಹ್ಮದ್ ಬಾವ(ಅಲ್ಪಸಂಖ್ಯಾತ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ), ಬಾಷಾ ಮಾಸ್ಟರ್, ಲತಾ ಭಂಡಾರಿ, ಉಮೈ ಬಾನು, ಜಯಲಕ್ಷ್ಮೀ, ಮುಸ್ತಾಫ, ಕಾರ್ಮಿಕ ಘಟಕ ಅಧ್ಯಕ್ಷ ಕೃಷ್ಣ, ವಿನೋದರ ಪೂಜಾರಿ(ಅಡ್ವಕೇಟ್), ವೀಣಾ ಡಿ’ಸೋಜ, ಜೈನುದ್ದೀನ್ ಅಡ್ಡೂರು, ಅಹ್ಮದ್ ಬಾವ(ಮೋನು), ಕವಿತಾ, ಸುಜಾತಾ ಭಂಡಾರಿ, ಸುಮತಿ ಮತ್ತಿತರರು ಇದ್ದರು.ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೆಲಿನ್ ಫೆರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೆಲಿನ್ ಫೆರ್ನಾಂಡಿಸ್ ಸ್ವಾಗತಿಸಿ ಗುರುಪುರ ಗ್ರಾಪಂ ಸ್ಥಳೀಯ ಸದಸ್ಯೆ ಗ್ಲಾಡಿಸ್ ಕ್ವಾಡ್ರಸ್ ವಂದಿಸಿದರು.
