ಬಂಟ್ವಾಳ :ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ಸೇವಾ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಕೈತ್ರೋಡಿ ಪ್ರೀಮಿಯರ್ ಲೀಗ್’ ವಾಲಿಬಾಲ್ ಪಂದ್ಯಾಟಕ್ಕೆ ರಾಯಿ ಗ್ರಾಮ ಪಂಚಾಯಿತಿ ಹಿರಿಯ ಸದಸ್ಯೆ ನಿರುಪಮಾ ಎಸ್.ಭಂಡಾರಿ ಚಾಲನೆ ನೀಡಿದರು.
ಪ್ರಗತಿಪರ ಕೃಷಿಕ ದಿನಕರ ಭಟ್ ಕಂಬಳದಡ್ಡ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಲೋಕೇಶ ಕೈತ್ರೋಡಿ, ಪ್ರಮುಖರಾದ ಕೆ.ಪರಮೇಶ್ವರ ಪೂಜಾರಿ, ಸಂತೋಷ್ ಕುಮಾರ್ ಬೆಟ್ಟು, ಹರೀಶ ಶೆಟ್ಟಿ ಕೈತ್ರೋಡಿ, ವಸಂತ ಪೂಜಾರಿ ಕೈತ್ರೋಡಿ ಮತ್ತಿತರರು ಇದ್ದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಸ್ವಾಗತಿಸಿ, ವಂದಿಸಿದರು.
