ಮೂಡುಬಿದಿರೆ : ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ವಿದ್ಯಾಗಿರಿಯ ಪಿ.ಜಿ. ಸೆಮಿನಾರ್ ಹಾಲ್‍ನಲ್ಲಿ ಆಯುರ್ವೇದ ವೈದ್ಯಕೀಯ ಶಿಬಿರ ಹಾಗೂ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಯಿತು.

ಉಡುಪಿಯ ಡಾ.ಶ್ರೀಧರ ಬಾಯರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, `ಹಿತ್ತಲ ಗಿಡ ಮದ್ದು’ ವಿಷಯದಲ್ಲಿ ಮಾಹಿತಿ ನೀಡಿದರು. ಸಸ್ಯಗಳನ್ನು ಉಳಿಸಿ, ಬೆಳೆಸುವುದರಿಂದ ಅನೇಕ ಪ್ರಾಣಿ, ಪಕ್ಷಿಗಳ ಉಳಿವಿಗೂ, ಬೀಜ ಪ್ರಸಾರಕ್ಕೂ ಅನುಕೂಲವಾಗುತ್ತದೆ.
ರೈತರು ಮಾರುಕಟ್ಟೆಯಲ್ಲಿರುವ ಬೇಡಿಕೆಯನ್ನು ಗಮನಿಸಿ ಗಿಡಮೂಲಿಕೆಗಳನ್ನು ಬೆಳೆಸುವ ಜಾಣತನ ತೋರಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವಾಲ್ಟರ್ ನಝರೆತ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಮೀನ್, ದ.ಕ. ಜಿಲ್ಲಾ ಸಂಘಟನ ಕಾರ್ಯದರ್ಶಿ ರೋನಿ ಮೆಂಡೋನ್ಸ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು.
ರಸಾಯನಶಾಸ್ತ್ರ ವಿಭಾಗದ ಡಾ. ಕೃಷ್ಣಮೂರ್ತಿ ಸ್ವಾಗತಿಸಿದರು.
ಪ್ರಾಂಶುಪಾಲ ಡಾ. ಬಿ. ವಿನಯಚಂದ್ರ ಶೆಟ್ಟಿ, ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಅಧೀಕ್ಷಕಿ ಡಾ. ಝೆನಿಕಾ ಡಿ’ಸೋಜ, ಕಾರ್ಯಕ್ರಮದ ಮುಖ್ಯ ಸಂಯೋಜಕ ಡಾ. ಪ್ರವೀಣ್ ಬಿ.ಎಸ್. ಆಡಳಿತಾಆ„ಕಾರಿ ಜೋಬಿನ್ ಉಪಸ್ಥಿತರಿದ್ದರು. ದ್ರ್ಯವ್ಯಗುಣ ವಿಭಾಗದ ಡಾ. ರವಿ ರಾವ್ ವಂದಿಸಿದರು. ಡಾ.ಗೀತಾ ಮತ್ತು ಡಾ.ರೋಹಿಣಿ ನಿರೂಪಿಸಿದರು.
