ಬಂಟ್ವಾಳ: ತಾ.ಪಂ.ನ ಅಧಿಕಾರಿಗಳ ಕುಂದುಕೊರತೆಗಳ ಮಾಸಿಕ ಸಭೆಯು ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ನಡೆಯಿತು.
ತಾ.ಪಂ.ಅದ್ಯಕ್ಷ ಚಂದ್ರ ಹಾಸ ಕರ್ಕೇರ ಸಭಾ ಅದ್ಯಕ್ಷ ತೆಯನ್ನು ವಹಿಸಿದ್ದರು.

masika sabhe

ತಾಲೂಕಿನಲ್ಲಿ ಎಚ್.1. ಎನ್. 1 ಸೊಂಕಿ ಗೆ ಯಾರು ಹೆದರುವ ಅಗತ್ಯ ವಿಲ್ಲ. ಬದಲಾಗಿ ಪ್ರತಿಯೊಬ್ಬರಿಗೂ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಆಗಬೇಕಾಗಿದೆ. ಸಜೀಪ ಗ್ರಾಮದಲ್ಲಿ ಎಚ್.1 ಎನ್ 1 ಸೊಂಕು ರೋಗ ಕ್ಕೆ ಇಬ್ಬರು ಬಲಿಯಾದ ಬಳಿಕ ಕನ್ಯಾನದಲ್ಲಿ ಒಂದು ಸಾವು ಅ ನಂತರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಹೇಳಿದರು.
ತೋಟಗಾರಿಕಾ ಇಲಾಖೆಯು ಎನ್.ಆರ್.ಇ. ಜಿ.ಕಾಮಗಾರಿ ನಡೆಸುವ ವೇಳೆ ಉಂಟಾಗುವ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ತಾ.ಪಂ.ಇಒ ತಿಳಿಸಿದ್ದಾರೆ. ಅರಣ್ಯ, ತೋಟಗಾರಿಕೆ ಮತ್ತು ಸಾಮಾಜಿಕ ತೋಟಗಾರಿಕೆ ಇಲಾಖೆಯ ವರು ಎನ್. ಆರ್.ಇ.ಜಿ. ಯೋಜನೆ ಯನ್ನು ಹೆಚ್ಚು ಕಾರ್ಯಗತಗೊಳಿಸಲು ಇ.ಒ. ತಿಳಿಸಿದರು.
ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲ್ಲಿ ಸ್ಮಶಾನ ಅಭಿವ್ರದ್ದಿ ಮಾಡಲು ಸರಕಾರ ಸೂಚನೆ ಇದೆ, ಎಲ್ಲಾ ಸ್ಮಶಾನ ಅಭಿವೃದ್ಧಿ ಜಾಗದಲ್ಲಿ ಗಿಡಗಳನ್ನು ನೆಡಲು ವ್ಯವಸ್ಥೆ ಮಾಡಲು ಸಾಮಾಜಿಕ ಅರಣ್ಯ ಇಲಾಖೆ ಯ ಅಧಿಕಾರಿಗಳಿಗೆ ಸೂಚಿಸಿದರು.
ನರಿಂಗಾನ ಗ್ರಾಮ.ಪಂಚಾಯತ್ ವ್ಯಾಪ್ತಿಯ ಲ್ಲಿ ಸುಮಾರು 20 ಮನೆಗಳಿದ್ದು, ಬೇಸಿಗೆಗಾಲದಲ್ಲಿ ನೀರಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ವಾಗಿದೆ, ಈ ಸಮಸ್ಯೆ ಯನ್ನು ಶೀಘ್ರವಾಗಿ ಪರಿಹರಿಸಲು ಇಂಜಿನಿಯರ್ ವಿಭಾಗದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇರಾ ಕೈಗಾರಿಕಾ ಪ್ರದೇಶಕ್ಕೆ ಮಂಚಿ ಮತ್ತು ಕುಕ್ಕಾಜೆ ರಸ್ತೆ ಬದಿಯಲ್ಲಿ ಮೆಸ್ಕಾಂ ಕೇಬಲ್ ಹಾಕಲು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಲ್ಲಿ ಬದಲಿ ವ್ಯವಸ್ಥೆ ಮಾಡಿ ಸಮಸ್ಯೆಗಳನ್ನು ಪರಿಹರಿಸಲು ಮೆಸ್ಕಾಂ ಅಧಿಕಾರಿಗಳಿಗೆ ತಾ.ಪಂ.ಅಬ್ಬಾಸ್ ಆಲಿ ಸೂಚಿಸಿದರು.

ಗ್ರಾ.ಪಂ.ಗಳ ನೀರಿನ ಬಿಲ್ ಗಳ ಸಮಸ್ಯೆ ಪರಿಹಾರವಾಗದೆ ಗೊಂದಲ ಉಂಟಾಗಿದೆ. ಮೆಸ್ಕಾಂ ಇಲಾಖೆ ನೀರಿನ ರೀಡಿಂಗ್ ಬಿಲ್ ವ್ಯವಸ್ಥೆ ಸ್ಥಾವರ ವಾರು ನೀಡುವಂತೆ ಈ ಹಿಂದೆ ಸೂಚಿಸಿದರು ಯಾಕೆ ಸ್ಥಾವರವಾರು ಬಿಲ್ ನೀಡುತ್ತಿಲ್ಲ , ಸಮಸ್ಯೆ ಬಗೆಹರಿಸಲು ನೀವು ಯಾಕೆ ಮುಂದಾಗಿಲ್ಲ ಎಂದು ಇ.ಒ.ಮೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರು. ಹೋಬಳಿ ವಾರು ಮೀಟಿಂಗ್ ಕರೆದು ಸಮಸ್ಯೆ ಬಗೆಹರಿಸಲು ಸೂಚಿಸಿದರು.

ಅಮ್ಟಾಡಿ ಗ್ರಾ.ಪಂ.ನವರು ಈವರೆಗೆ ಮೆಸ್ಕಾಂ ಬಿಲ್ ಕಟ್ಟಿಲ್ಲ ಸುಮಾರು 20 ಲಕ್ಷ ಬಾಕಿ ಇದೆ. ಎಂದು ಮೆಸ್ಕಾಂ ಅಧಿಕಾರಿ ಗಳು ಸಭೆಯಲ್ಲಿ ತಿಳಿಸಿದರು

ಈ ಸಂದರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿಸಮಿತಿ ಧನಲಕ್ಮೀ ಸಿ ಬಂಗೇರ,ತಾಪಂ. ಇ.ಒ.ರಾಜಣ್ಣ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *