ಬಂಟ್ವಾಳ: ಇಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ,130 ವಿದ್ಯಾರ್ಥಿ ಗಳಿಗೆ ತಾ.ಪಂ.ವತಿಯಿಂದ ಉಚಿತವಾಗಿ ನೀಡುವ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯ ಕ್ರಮ ತಾ.ಪಂ.ನ ಎಸ್.ಜಿ.ಅರ್.ಎಸ್.ವೈ.ಸಭಾಂಗಣದಲ್ಲಿ ನಡೆಯಿತು.

sports wear (5)
ಕಾರ್ಯಕ್ರಮ ದ ಅದ್ಯಕ್ಷ ತೆ ವಹಿಸಿದ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಸಮವಸ್ತ್ರ ವಿತರಿಸಿ ಮಾತನಾಡಿ, ಪಾಠದ ಜೊತೆ ಕ್ರೀಡೆ ಗೂ ಸಮಾನ ವಾದ ಪ್ರಾಶಸ್ತ್ಯ ನೀಡಿದಾಗ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

sports wear (1)
ಮೌಲ್ಯಾಧಾರಿತ ಜೀವನದಲ್ಲಿ ಹಾಗೂ ಶಿಕ್ಷಣದಲ್ಲಿ ಕ್ರೀಡೆ ಯೂ ಒಂದು ಭಾಗವಾಗಬೇಕು. ಸರಿಯಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದಾಗ ವಿದ್ಯಾರ್ಥಿಗಳು ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ.

sports wear (4)
ಈ ಕಾರ್ಯಕ್ರಮ ದ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸಿಗಲಿ ಎಂದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ ಕ್ರೀಡೆ ಗೆ ಸಹಕಾರ ನೀಡುವ ನಿಟ್ಟಿನಲ್ಲಿ ತಾ.ಪಂ.ವಿಶೇಷ ಮುತುವರ್ಜಿಯಿಂದ ಸಮವಸ್ತ್ರ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ಕ್ರೀಡೆ ಯಲ್ಲಿ ಭಾಗವಹಿಸುವ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ, ಸೋಲು ಗೆಲುವಿನ ಚಿಂತೆ , ಕೀಳರಿಮೆ ಬೇಡ. ಕೌಶಲಗಳನ್ನು ಬಳಸಿಕೊಂಡು ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮುಂದುವರಿಯಬೇಕುಎಂದು ಹೇಳಿದರು.

sports wear (3)
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಮೀ ಸಿ ಬಂಗೇರ, ತಾ.ಪಂ.ಇ.ಒ.ರಾಜಣ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತಾಲೂಕು ದೈಹಿಕ ಶಿಕ್ಷಕರ ಸಂಘದ ಅದ್ಯಕ್ಷ ಚಿನ್ನಪ್ಪ ಸ್ವಾಗತಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *