ಮೂಡುಬಿದಿರೆ: ಇಂದಿನ ಯುವಶಕ್ತಿಯೇ ದೇಶದ ಸಂಪತ್ತು. ಯುವಜನರಿಗೆ ಅಭಿವೃದ್ಧಿಯ ಗುರಿಯನ್ನು ತೋರಿಸಿಕೊಡಬೇಕು. ದೇಶಕ್ಕೆ ಅಗತ್ಯವಾದ ಪ್ರಜ್ಞಾವಂತ ನಾಗರಿಕರನ್ನು ರೂಪಿಸುವ ಕೆಲಸವನ್ನು ಜೇಸಿಸ್ ಮಾಡುತ್ತಿದೆ ಎಂದು ವಲಯ ಆಡಳಿತಾತ್ಮಕ ವಿಭಾಗದ ನಿರ್ದೇಶಕ ಅಶೋಕ್ ಚೂಂತಾರ್ ಹೇಳಿದರು.
ತ್ರಿಭುವನ್ ಜೇಸಿಸ್, ಜೇಸಿರೇಟ್ ಮತ್ತು ಜ್ಯೂನಿಯರ್ ಜೇಸಿಸ್ ವತಿಯಿಂದ ಭಾನುವಾರ ಸಮಾಜ ಮಂದಿರದಲ್ಲಿ ನಡೆದ ಜೇಸೀ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ತ್ರಿಭುವನ್ ಜೇಸಿಸ್ ಅಧ್ಯಕ್ಷೆ ಸಂಗೀತ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಡೆದ ಅವಿಭಜಿತ ದ.ಕ ಜಿಲ್ಲಾ ಮಟ್ಟದ ಕರೋಕೆ ಗಾಯನ ಸ್ಪರ್ಧೆಯನ್ನು ಉದ್ಯಮಿ ಅಬುಲ್ ಆಲಾ ಉದ್ಘಾಟಿಸಿದರು.

JCI
ತೆರೆ ಮರೆಯಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿರುವ ನಿವೃತ್ತ ಶಿಕ್ಷಕಿ ಮಕ್ಕಳಿಗೆ ಅಂದದ ಬರಹವನ್ನು ಕಲಿಸುತ್ತಿರುವ ತೆರೆಸಿಯಾ ಡಿಸೋಜ, ಗಾಯಕ ಪಿ.ಎಂ. ಹಸನಬ್ಬ, ಕೀಬೋರ್ಡ್ ವಾದಕ ನಂದನ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಮೂಡುಬಿದಿರೆಯಲ್ಲಿ ಪ್ರತೀ ಭಾನುವಾರ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿರುವ ಜವನೆರ್ ಬೆದ್ರ ತಂಡದ ಸದಸ್ಯರನ್ನು ಹಾಗೂ ಮೂಡುಬಿದಿರೆ ಸಮಗ್ರ ಮಾಹಿತಿಯ ಆ್ಯಪ್ ಸಿದ್ಧಪಡಿಸಿದ ನವೀನ್ ಕುಮಾರ್ ಅವರನ್ನು ಗೌರವಿಸಲಾಯಿತು.
ಜೇಸೀ ಸಪ್ತಾಹದಂಗವಾಗಿ ನಡೆದ ಪುಟಾಣಿ ರಾಜ-ರಾಣಿ, ಭಾಷಣ ಸ್ಪರ್ಧೆ, ಪಾರಂಪರಿಕ ತಾಣಗಳ ಛಾಯಾಚಿತ್ರ ಸ್ಪರ್ಧೆ, ಗೀತ್‍ಗಾಥೆ ಚಲ್ ಕರೋಕೆ ಸಂಗೀತ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜೇಸಿರೇಟ್ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ಜ್ಯೂನಿಯರ್ ಜೇಸಿ ಅಧ್ಯಕ್ಷ ಶಶಾಂಕ್, ಜೇಸಿ ಕೋಶಾಧಿಕಾರಿ ಹಮೀದ್, ಜೇಸಿಸ್‍ನ ಮಾಜಿ ಅಧ್ಯಕ್ಷರುಗಳಾದ ವಿನೋದ್ ಕುಮಾರ್, ಸಂತೋಷ್ ಆರ್.ಎಲ್., ಸಂತೋಷ ಕುಮಾರ್, ಸಂತೋಷ ಶೆಟ್ಟಿ, ಮಕ್ಬೂಲ್ ಹುಸೇನ್, ಅಭಿಜಿತ್ ಎಂ., ಮಹೇಂದ್ರವರ್ಮ ಜೈನ್, ಚಂದ್ರಹಾಸ ದೇವಾಡಿಗ, ಧೀರೇಂದ್ರ ಜೈನ್, ಶ್ವೇತಾ ಜೈನ್, ವಿನಯಚಂದ್ರ ಉಪಸ್ಥಿತರಿದ್ದರು.
ಬಳಿಕ ಕಲಾಶ್ರೀ ಕುಡ್ಲ ತಂಡದಿಂದ ಬಲೆ ತೆಲಿಪಾಲೆ, ಲಿಟ್ಲ್‍ಫ್ಲವರ್ ಸ್ಕೂಲ್ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಹಾಗೂ ಸಂಘಟಕ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

By Suddi9

Leave a Reply

Your email address will not be published. Required fields are marked *